ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಕೃಷಿ ವಿವಿ ವಿದ್ಯಾರ್ಥಿಗಳಿಂದ ರೈತರೊಂದಿಗೆ ಚರ್ಚೆ

0 320

ರಿಪ್ಪನ್‌ಪೇಟೆ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ‘ಗಂದಧ ಗುಡಿ’ ತಂಡದ ವಿದ್ಯಾರ್ಥಿಗಳು ಸಮಗ್ರ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಗುಂಪು ಚರ್ಚೆಯನ್ನು ರೈತರೊಂದಿಗೆ ಕೋಡೂರಿನಲ್ಲಿ ಬುಧವಾರ ನಡೆಸಿದರು.

ರಾಸಾಯನಿಕ ಗೊಬ್ಬರಗಳಿಂದ ಇಳುವರಿ ಹೆಚ್ಚಾಗಬಹುದು ಆದರೆ ಮುಂದಿನ ದಿನಮಾನಗಳಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ, ಮಣ್ಣು ಉಳುಮೆ ಮಾಡಲು ಯೋಗ್ಯವಲ್ಲದ ರೀತಿಯಲ್ಲಿ ಪರಿವರ್ತನೆಯಾಗುತ್ತದೆ. ಆದುದರಿಂದ ಸಾವಯವ ಗೊಬ್ಬರ ಹಾಗೂ ಜೈವಿಕ ಗೊಬ್ಬರವನ್ನು ಬಳಸಬೇಕು ಎಂದು ಹೇಳಿದರು.

ಟ್ರೈಕೋಡರ್ಮಾ ಹಾಗೂ ಸುಡೋಮೊನಾಸ್ ಪೋಷಕಾಂಶಗಳನ್ನು ನೀಡುತ್ತವೆ. ಮಣ್ಣಿನಿಂದ ಹುಟ್ಟುವ ರೋಗಗಳನ್ನು ತಡೆದು ಮಣ್ಣಿನ ಆರೋಗ್ಯ ಕಾಪಾಡುತ್ತದೆ. “ಜೈವಿಕ ಗೊಬ್ಬರಗಳ ಪ್ರಭಾವ ನಿಧಾನಗತಿಯಲ್ಲಿದ್ದರು ಇಳುವರಿಯನ್ನು ಹೆಚ್ಚಿಸಿ ಮಣ್ಣಿನ ಫಲವತ್ತತೆ ಕಾಪಾಡುತ್ತದೆ. ಕೃಷಿ ತ್ಯಾಜ್ಯಗಳ ಕೊಳೆಯುವಿಕೆಯಲ್ಲಿ ಸಹಾಯ ಮಾಡಿ ಪೋಷಕಾಂಶಗಳನ್ನು ಬೆಳೆಗಳಗೆ ನೀಡುತ್ತದೆ ಎಂದು ತಿಳಿಸಿದರು.
ಕೃಷಿ ವಿವಿ, ತೋಟಗಾರಿಕೆ ಇಲಾಖೆಗಳಿಂದ ದೊರೆಯುವ ಜೈವಿಕ ಗೊಬ್ಬರಗಳನ್ನು ಬಳಸಿ ಎಂದು ಸಂಪನ್ಮೂಲ ವ್ಯಕ್ತಿ ಡಾ.ರವಿಶಂಕರ್ ಹೇಳಿದರು.

ಬೇರುಹುಳುವಿನ ಬಾಧೆಯಿಂದ ಅಡಿಕೆ ಉತ್ಪಾದನೆ ಕುಂಠಿತಗೊಂಡಿದೆ. ಬೇರುಹುಳುವಿನ ನಿರ್ವಹಣೆ ಹೇಗೆ ಮಾಡಬೇಕು ? ಎಂಬ ರೈತರ ಪ್ರಶ್ನೆಗೆ ಉತ್ತರಿಸಿದ ಸಹಾಯಕ ತೋಟಗಾರಿಕೆ ಅಧಿಕಾರಿ ಡಾ.ಸಚಿನ್, ಬೇರುಹುಳುಗಳು ಮಣ್ಣಿನ ತೇವಾಂಶ ಹೆಚ್ಚಿದರೆ ಮೇಲ್ಭಾಗದಲ್ಲಿ ಹಾಗೂ ತೇವಾಂಶ ಕಡಿಮೆಯಿದ್ದರೆ ಮಣ್ಣಿನ ಆಳದಲ್ಲಿರುತ್ತವೆ. ಮಣ್ಣನ್ನು ಅಗೆದು ಸಡಿಲಗೊಳಿಸಿ ಬೇರುಹುಳುಗಳನ್ನು ಸಂಗ್ರಹಿಸಿ ನಾಶಪಡಿಸಬೇಕು. ಮೆಟಾರೈಜಿಯಮ್ ಅನಿಸೊಪ್ಲಿಯೆ ಪ್ರತಿ ಗಿಡಕ್ಕೆ ಹಾಕುವುದರಿಂದ ಬೇರುಹುಳುಗಳಿಗೆ ರೋಗ ಬಂದು ಸಾಯುತ್ತವೆ. ಮೊಹಕ ಬಲೆಯನ್ನು ಬಳಸಿ ದುಂಬಿಯನ್ನು ನಾಶಪಡಿಸಿ ನಿರ್ವಹಣೆ ಮಾಡಬಹುದು ಎಂದರು.

Leave A Reply

Your email address will not be published.

error: Content is protected !!