ಅರಸಾಳು ನಿಲ್ದಾಣ ಮೇಲ್ದರ್ಜೆಗೇರಿದರೂ ರಾತ್ರಿ ನಿಲ್ಲದ ರೈಲು ! ಕೇಳುವವರಿಲ್ಲ ಪ್ರಯಾಣಿಕರ ಗೋಳು

0 471

ರಿಪ್ಪನ್‌ಪೇಟೆ: ಇಲ್ಲಿನ ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು – ತಾಳಗುಪ್ಪ ಮಾರ್ಗದ ರಾತ್ರಿ ವೇಳೆಯ ರೈಲು ನಿಲುಗಡೆಯಾಗದೇ ಪ್ರಯಾಣಿಕರ ಗೋಳು ಕೇಳೋರಿಲ್ಲದಂತಾಗಿ ಹಲವು ಪ್ರಯಾಣಿಕರು ಆನಂದಪುರ ಹೋಗಿ ಊರು ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು  ರೈಲ್ವೆ ಪ್ರಯಾಣಿಕ ಮಹಿಳೆಯರು ತಮ್ಮ ಆಕ್ರೋಶವನ್ನು ಈ ರೀತಿ ವ್ಯಕ್ತಪಡಿಸಿದರು.

ಮಲೆನಾಡಿನ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಆರಂಭಗೊಂಡ ಅರಸಾಳು ರೈಲ್ವೆ ನಿಲ್ದಾಣದಿಂದಾಗಿ ಕುಂದಾಪುರ – ಉಡುಪಿ – ಮಂಗಳೂರು – ಭಟ್ಕಳ – ಬೈಂದೂರು – ಹೊಸನಗರ – ಕೊಲ್ಲೂರು ಸಿಗಂದೂರು – ರಾಮಚಂದ್ರಪುರ ಮಠ – ಹೊಂಬುಜ ಜೈನಮಠ ಹೀಗೆ ಹಲವು ಸಂಪರ್ಕದ ಹೃದಯ ಭಾಗವಾಗಿರುವ ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಿಂದಾಗಿ ಸಾಕಷ್ಟು ಪ್ರಯಾಣಿಕರಿಗೆ ರಾಜಧಾನಿ ಸೇರಿದಂತೆ ದೆಹಲಿ – ಮೈಸೂರು ಹೀಗೆ ಹಲವು ಪ್ರಮುಖ ಕೇಂದ್ರಗಳಿಗೆ ಕಡಿಮೆ ಖರ್ಚಿನಲ್ಲಿ ಓಡಾಡಲು ಉತ್ತಮವಾದ ಸಂಪರ್ಕ ಸಾರಿಗೆ ಸೌಲಭ್ಯವಾಗಿತ್ತು.

ಆದರೆ ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರರ ವಿಶೇಷ ಆಸಕ್ತಿಯಿಂದಾಗಿ ಅರಸಾಳು ರೈಲ್ವೆ ನಿಲ್ದಾಣ (ಮಾಲ್ಗುಡಿ) ನಿಲ್ದಾಣವಾಗಿ ಅಭಿವೃದ್ಧಿ ಪಡಿಸುವುದರೊಂದಿಗೆ ಬೆಂಗಳೂರು ಮೈಸೂರು ಇಂಟರ್‌ಸಿಟಿ ರೈಲು ಪ್ಯಾಸೆಂಜರ್ ರೈಲು ಹೀಗೆ ಶಿವಮೊಗ್ಗದಿಂದ ಹೋಗುವ ಹಲವು ರೈಲುಗಳನ್ನು  ಕುಂಸಿ ಅರಸಾಳು ಆನಂದಪುರ – ಸಾಗರ – ತಾಳಗುಪ್ಪಕ್ಕೆ ಮುಂದುವರಿಸಿ ಹೆಚ್ಚು ಪ್ರಯಾಣಿಕರಿಗೆ ಕಡಿಮೆ ಖರ್ಚಿನಿಂದ ಸಮಯದ ಉಳಿತಾಯದೊಂದಿಗೆ ರೈಲ್ವೆ ಸೌಲಭ್ಯವನ್ನು ಕಲ್ಪಿಸಲಾಗಿದ್ದರೂ ಕೂಡಾ ಅರಸಾಳು ರೈಲ್ವೆ ನಿಲ್ದಾಣದಲ್ಲಿ ರಾಜಧಾನಿ ಬೆಂಗಳೂರಿನಿಂದ ಮಧ್ಯಾಹ್ನ ಹೊರಡುವ ರೈಲು ರಾತ್ರಿ ಅರಸಾಳಿನಲ್ಲಿ ನಿಲುಗಡೆಯಾಗದೆ ಪ್ರಯಾಣಿಕರು ಆನಂದಪುರ ಹೋಗಿ ಬರುವ ಸ್ಥಿತಿ ನಿರ್ಮಾಣವಾಗಿದೆ.

ಅದೇ ಅರಸಾಳಿನಲ್ಲಿ ರೈಲು ನಿಲ್ಲಿಸಿದರೆ ಮಾಡಿದರೆ ಸಾಕಷ್ಟು ಪ್ರಯಾಣಿಕರಿಗೆ ರಿಪ್ಪನ್‌ಪೇಟೆ ಸುತ್ತಮುತ್ತ ಮತ್ತು ಹೊಸನಗರ, ಕೋಡೂರು, ಮಾಸ್ತಿಕಟ್ಟೆ, ಹುಂಚ, ಕೋಣಂದೂರು ಕಡೆ ಹೋಗಲು ಆನುಕೂಲವಾಗುವುದು ಎಂದು ಹೇಳಿ ಸಂಬಂಧಿಸಿದ ಸಂಸದ ಬಿ.ವೈ. ರಾಘವೇಂದ್ರರವರು ಈ ಕೂಡಲೇ ಸಂಬಂಧಿಸಿದ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಯಾಣಿಕರಿಗಾಗುತ್ತಿರುವ ಆನಾನುಕೂಲಕ್ಕೆ ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.

ಅಲ್ಲದೆ ಈ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದರೊಂದಿಗೆ ಅರಸಾಳು ಬಳಿ ಪ್ಲೈ ಓವರ್ ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರದಿಂದ ಅನುಧಾನ ಬಿಡುಗಡೆ ಮಾಡಿಸುವುದರೊಂದಿಗೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದು ಇದರೊಂದಿಗೆ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಹೋಗಿ ಬರುವ ಎಲ್ಲಾ ರೈಲುಗಳನ್ನು ನಿಲುಗಡೆ ಮಾಡುವಂತೆ ಲೀಲಾಶಂಕರ್, ಜಯಮ್ಮ, ಇಂದ್ರಮ್ಮ, ವಾಣಿ, ಸುದಂರಮ್ಮ, ಶಶಿರೇಖಾ, ಲೇಖನ, ವೇದಾ, ಗೀತಾ, ವಸುಂದರ, ಶೈಲಾ, ಶೀಲಾ, ಮಹಿಳಾ ಪ್ರಯಾಣಿಕರು ಆಗ್ರಹಿಸಿದ್ದಾರೆ.

Leave A Reply

Your email address will not be published.

error: Content is protected !!