ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿ.ಎ.ಗಳಿಂದ ಶಾಸಕರಿಗೆ ಮನವಿ

0 325

ಹೊಸನಗರ: ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಕ್ತ ಕೊಠಡಿಗಳಿಲ್ಲ ಇತ್ತೀಚಿನ ದಿನಗಳಲ್ಲಿ ಎಲ್ಲ ವ್ಯವಹಾರ ದಾಖಲೆಗಳು ಕಂಪ್ಯೂಟರ್ ದಾಖಲೆಗಳೇ ಆಗಿರುವುದರಿಂದ ಕಂಪ್ಯೂಟರ್ ಹಾಗೂ ಇತರೆ ಬೇಕಾಗುವ ಸಲಕರಣೆಗಳನ್ನು ಸರ್ಕಾರದ ವತಿಯಿಂದ ನೀಡಬೇಕೆಂದು ಹೊಸನಗರ ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ತೀರ್ಥಹಳ್ಳಿ-ಹೊಸನಗರ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರಿಗೆ ಮನವಿ ಪತ್ರ ನೀಡಿದರು.

ಮನವಿ ಪತ್ರದಲ್ಲಿ, ನಾವು ಪ್ರತಿನಿತ್ಯ ಸಾರ್ವಜನಿಕರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳ ಆದೇಶ ಹಾಗೂ ಸೂಚನೆಯನ್ವಯ ನಮ್ಮಗಳ ಕರ್ತವ್ಯ ನಿರ್ವಹಣೆ ಮಾಡುತ್ತಾ ಬಂದಿರುತ್ತೇವೆ. ಇಂದು ಕರ್ತವ್ಯ ನಿರ್ವಹಣಾ ಹಂತದಲ್ಲಿ ಗ್ರಾಮ ಆಡಳಿತಾಧಿಕಾರಿಗಳಾದ ನಾವುಗಳು ಮೂಲಭೂತ ಸೌಕರ್ಯ ಇಲ್ಲದೇ ಹಲವು ಸಮಸ್ಯೆಗಳನ್ನು ಎದುರಿಸುತ್ತಾ ನೂರಕ್ಕೆ ಪ್ರತಿಶತ 50ರಷ್ಟು ಕಾರ್ಯವನ್ನು ಸಂಯೋಜನೆ ಫ್ರೂಟ್ ತಂತ್ರಾಂಶ ಹಾಗೂ ಇ-ಜನ್ಮ ಒಳಗೊಂಡಂತೆ ತಾಂತ್ರಿಕವಾಗಿ ತಂತ್ರಾಂಶಗಳ ಮೂಲಕ ನಮ್ಮಗಳ ಕರ್ತವ್ಯ ನಿರ್ವಹಣೆಯನ್ನು ಮಾಡುತ್ತಿರುತ್ತೇವೆ.

ನಮ್ಮಗಳ ಕರ್ತವ್ಯ ನಿರ್ವಹಣೆಗೆ ಅನುಕೂಲಕರ ರೀತಿಯಲ್ಲಿ ಉಲ್ಲೇಖ(2) ರ ಸರ್ಕಾರದ ಪತ್ರ ಅನುಸಾರ ತಮ್ಮ ಸ್ಥಳೀಯ ಪ್ರವೇಶಾವೃದ್ಧಿ ಯೋಜನೆಯಡಿ ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಕ್ತ ಕೊಠಡಿ, ಕಂಪ್ಯೂಟರ್ ಒಳಗೊಂಡಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ನಮ್ಮಗಳ ಕೆಲಸ ನಿರ್ವಹಣೆಯ ಉತ್ಸಾಹವನ್ನು ಇಮ್ಮಡಿಗೊಳಿಸಿ ನಮ್ಮಗಳೆಲ್ಲರರಿಗೂ ಪ್ರೋತ್ಸಾಹಾತ್ಮಕ ಬೆಂಬಲ ನೀಡಬೇಕೆಂದು ಕೇಳಿಕೊಂಡಿದ್ದಾರೆ.

ಈ ಮನವಿ ಪತ್ರ ನೀಡುವ ಸಂದರ್ಭದಲ್ಲಿ ಹೊಸನಗರ ತಾಲ್ಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಕೌಶಿಕ್, ಇಂದಿರಾ, ಶೋಭಾ, ನವೀನ್‌ಕುಮಾರ್, ದೀಪು, ಜಾಗೃತಿ, ಯೋಗೇಶ್, ಸದಾಶಿವಪ್ಪ, ಸುನೀಲ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!