ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ರೌಡಿಶೀಟರ್ ಹತ್ಯೆ !

0 38

ಭದ್ರಾವತಿ : ಇಲ್ಲಿನ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ರೌಡಿಶೀಟರ್ ಮುಜಾಯಿದ್ದೀನ್ (32) ಎಂಬಾತನನ್ನ ಬರ್ಬರ ಹತ್ಯೆ ಮಾಡಲಾಗಿದೆ.

ಗುರುವಾರ ರಾತ್ರಿ ಸುಮಾರು 12.30 ರ ಸುಮಾರಿಗೆ ಮೃತ ರೌಡಿಶೀಟರ್ ಮನೆಯಿಂದ ಹೊರಬಂದಿದ್ದಾಗ ದುಷ್ಕರ್ಮಿಗಳು ಕೊಲೆ ಮಾಡಿ ಹೋಗಿದ್ದಾರೆ.

ಇನ್ನು ಮುಜಾಯಿದ್ದೀನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಘಟನೆ ಕುರಿತು ಸ್ಥಳಕ್ಕೆ ಪೇಪರ್ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

Leave A Reply

Your email address will not be published.

error: Content is protected !!