ಅಮೃತ ಸಂಚಲನ ಯುವ ವೇದಿಕೆಯಿಂದ ನ.03 ರಂದು ಗರ್ತಿಕೆರೆಯಲ್ಲಿ ‘ಮಾತೃನುಡಿ’ ಅದ್ದೂರಿ ಕನ್ನಡ ರಾಜ್ಯೋತ್ಸವ

0 323

ರಿಪ್ಪನ್‌ಪೇಟೆ : ಸಂಚಲನ ಸಮುದಾಯ ಅಭಿವೃದ್ಧಿ ಟ್ರಸ್ಟ್ (ರಿ) ಅಮೃತ ಗರ್ತಿಕೆರೆ, ಅಮೃತ ಸಂಚಲನ ಯುವ ವೇದಿಕೆ ಅರ್ಪಿಸುವ ‘ಮಾತೃನುಡಿ’ 11ನೇ ವರ್ಷದ ‘ಕರುನಾಡ ಹಬ್ಬ’ ನ.03 ರಂದು ಗರ್ತಿಕೆರೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಕಾರ್ಯಕ್ರಮಗಳು :
ಗರ್ತಿಕೆರೆಯ ಬಿ.ಎಸ್ ಪುರುಷೋತ್ತಮ್ ರಾವ್ ವೃತ್ತದಲ್ಲಿ ಬೆಳಗ್ಗೆ 9:30 ಕ್ಕೆ ನಿಟ್ಟೂರು ಮಠದ ರೇಣುಕಾನಂದ ಮಹಾಸ್ವಾಮೀಜಿಯವರಿಂದ ಕನ್ನಡ ಧ್ವಜಾರೋಹಣ ನೆರವೇರಲಿದೆ. 10:30 ಕ್ಕೆ ಗರ್ತಿಕೆರೆ ಹಾಗೂ ಸುತ್ತಮುತ್ತಲಿನ ಸಹೃದಯಿ ಗ್ರಾಮಸ್ಥರ ಸಮ್ಮುಖದಲ್ಲಿ ಕನ್ನಡ ತಾಯಿ ಭುವನೇಶ್ವರಿ ಅದ್ದೂರಿ ಮೆರವಣಿಗೆ ನಡೆಯಲಿದೆ.

ನಂತರ ಸಂಜೆ 6:30 ಕ್ಕೆ ಅಮೃತ ಗ್ರಾಪಂ ಅಧ್ಯಕ್ಷ ವಿಶ್ವನಾಥ್ ಗಂದ್ರಳ್ಳಿ ಅಧ್ಯಕ್ಷತೆಯಲ್ಲಿ ‘ನಾವು ನಮ್ಮವರು’ 2023ನೇ ಸಾಲಿನ ಹೊಸನಗರ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪುಟ್ಟಸ್ವಾಮಿ ಕೆ.ಕೆ. ಸಹ ಶಿಕ್ಷಕರು ಕರ್ನಾಟಕ ಪಬ್ಲಿಕ್ ಶಾಲೆ ಅಮೃತ ಇವರಿಗೆ ಸನ್ಮಾನ. ನಂತರ ‘ಅಮೃತ ಶಿಕ್ಷಕರ ಕುಟುಂಬ’ ರುದ್ರಪ್ಪ, ಹೆಚ್. ಸಹಶಿಕ್ಷಕರು ಕರ್ನಾಟಕ ಪಬ್ಲಿಕ್ ಸ್ಕೂಲ್ ಶೆಟ್ಟಿಹಳ್ಳಿ, ಶಿವಮೊಗ್ಗ ತಾಲೂಕು, ಲಕ್ಷ್ಮಿ ಹೆಚ್, ಸಹಶಿಕ್ಷಕರು. ಕರ್ನಾಟಕ ಪಬ್ಲಿಕ್ ಸ್ಕೂಲ್ ಶೆಟ್ಟಿಹಳ್ಳಿ, ರಶ್ಮಿ. ಕೆ.ಬಿ. ಸಹಶಿಕ್ಷಕರು. ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಸೂಳೇಬೈಲು, ಶಿವಮೊಗ್ಗ ತಾಲೂಕು ಇವರಿಗೆ ‘ಗುರುನಮನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಂಜೆ 07 ಗಂಟೆಗೆ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ 07:30 ಕ್ಕೆ ‘ಕನ್ನಡ ಜ್ಯೋತಿ ಕರುನಾಡಿಗೆ ಬೆಳಕಿನ ಮೌನ ನಮನ’ ನಂತರ 08 ಗಂಟೆಯಿಂದ ಝೀ ಕನ್ನಡ ಸರಿಗಮಪ ಖ್ಯಾತಿಯ ಸ್ಪೆಷಲ್ ಎಂಟ‌ರ್ಟೈನರ್ ಸಾಗರದ ದಿಯಾ ಹೆಗಡೆ ಮತ್ತು ದಿಶಾ ಹೆಗಡೆ ಹಾಗೂ ಸಾಗರ್ ಟ್ರ್ಯಾಕ್ಸ್ ಮೆಲೋಡೀಸ್ ಸಂಗಡಿಗರಿಂದ ‘ಸಂಗೀತ ಸಂಜೆ’ ಕಾರ್ಯಕ್ರಮ ನಡೆಯಲಿದೆ ಎಂದು ಸಂಚಲನಾ ಯುವ ವೇದಿಕೆಯ ಸದಸ್ಯರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!