Hosanagara | ಸ್ಪೋಟ್ಸ್ ಅಸೋಸಿಯೇಷನ್‌ ನವೀಕೃತ ಕಟ್ಟಡ ಉದ್ಘಾಟನೆ ;
ಸಂಘ-ಸಂಸ್ಥೆಗಳು ಸಮಾಜಮುಖಿ ಕೆಲಸ ಮಾಡಿದರೆ ಉತ್ತಮ ಏಳಿಗೆ ಕಾಣಲು ಸಾಧ್ಯ – ಬೇಳೂರು

0 371


ಹೊಸನಗರ: ಯಾವುದೇ ಸಂಘ-ಸಂಸ್ಥೆಗಳು ದೈನಂದಿನ ಚಟುವಟಿಕೆಗಳೊಂದಿಗೆ ಸಮಾಜಮುಖಿಯಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಉತ್ತಮ ಏಳಿಗೆ ಕಾಣುತ್ತದೆ ಎಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳಿದರು.


ಹೊಸನಗರದ ಸ್ಪೋಟ್ಸ್ ಅಸೋಸಿಯೇಷನ್ ಕ್ಲಬ್ ಆವರಣದಲ್ಲಿ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿ, ಈ ಸಂಸ್ಥೆ ಸಮಾಜದಲ್ಲಿ ಉತ್ತಮ ಕೊಡಿಗೆ ನೀಡುತ್ತಿರುವ ಬಗ್ಗೆ ತಿಳಿದುಕೊಂಡಿದ್ದೇನೆ ಈ ಸಂಸ್ಥೆ ಸದಸ್ಯರ ವಂತಿಕೆಯಿಂದ ಉತ್ತಮ ಕಟ್ಟಡ ನಿರ್ಮಿಸಿರುವುದು ಹೆಮ್ಮೆಯಾಗುತ್ತಿದೆ. ಮುಂದಿನ ದಿನದಲ್ಲಿ ಅನಾಥಶ್ರಮ ಮಾಡಲು ಎರಡು ಎಕರೆ ಜಾಗ ಕೇಳಿದ್ದು ಅದನ್ನು ಸರ್ಕಾರದ ಮಟ್ಟದಲ್ಲಿ ಮಂಜೂರಾತಿ ಮಾಡಿಸಿಕೊಡಲು ಸಿದ್ಧನಿದ್ದು ಜಾಗ ಹುಡುಕಲು ತಿಳಿಸಿದ್ದೇವೆ. ನಾನು ಶಾಸಕನಾಗಿ ನೀವು ಮಾಡುವ ಸಮಾಜಮುಖಿ ಉತ್ತಮ ಕೆಲಸಗಳಿಗೆ ನಾನು ನಿಮ್ಮ ಜೊತೆಗಿರುತ್ತೇನೆ ಎಂದರು.


ಈ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಗುಬ್ಬಿಗ ಅನಂತರಾವ್, 1959ನೇ ಸಾಲಿನಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಮಳಲಿ ಬಿ. ಪರಮೇಶ್ವರರಾವ್‌ರವರ ಪರಿಶ್ರಮದಿಂದ ಸ್ಥಾಪನೆಗೊಂಡ ಈ ಸಂಸ್ಥೆಯನ್ನು ಇಷ್ಟು ವರ್ಷಗಳ ಕಾಲ ಬೆಳೆಸಲು ನಮ್ಮ ಸಂಸ್ಥೆಯ ಮಾಜಿ ಅಧ್ಯಕ್ಷರ, ಸದಸ್ಯರ ಪಾತ್ರ ಹಿರಿದಾಗಿದೆ. ನಮ್ಮ ಸಂಸ್ಥೆ ಸುಮಾರು 64ನೇ ವರ್ಷಕ್ಕೆ ಕಾಲಿಟ್ಟಿದೆ ಈಗ 265 ಸದಸ್ಯರನ್ನು ಹೊಂದಿದೆ. ಈ ಸದಸ್ಯರ ಪರಿಶ್ರಮ ಈ ಸಂಸ್ಥೆಯ ಮೇಲಿದೆ ಸ್ಥಾಪಿಸುವಾಗ ಯಾರು ಈ ಮಟ್ಟಕ್ಕೆ ಬೆಳೆಯುತ್ತದೆ ಹೊಸನಗರ ತಾಲ್ಲೂಕಿಗೆ ಒಂದು ಮಾದರಿ ಸಂಸ್ಥೆಯಾಗುತ್ತದೆ ಎಂದು ತಿಳಿದಿರಲಿಲ್ಲ‌. ನಮ್ಮ ಈ ಸಂಸ್ಥೆ ಇಲ್ಲಿಯವರೆಗೆ ಸಾರ್ವಜನಿಕರ ಉಪಯೋಗದ ಉದ್ಧೇಶಕ್ಕಾಗಿಯೇ ಹುಟ್ಟು ಹಾಕಿರುವ ಸಂಸ್ಥೆಯಾಗಿದ್ದು ನಮ್ಮ ಸಂಸ್ಥೆ ಇಲ್ಲಿಯವರೆಗೆ ಅನೇಕ ಬಂದೂಕು ತರಬೇತಿ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಐ ಕ್ಯಾಂಪ್, ರಕ್ತದಾನ ಶಿಬಿರ, ಪ್ರತಿಬಾ ಪುರಸ್ಕಾರ, ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತೀಕ ಕಾರ್ಯಕ್ರಮಗಳು ನಾಟಕ ರಂಗ ಕಲಾವಿದರಿಗೆ ಸಹಾಯ ಹಸ್ತ, ಅನಾರೋಗ್ಯ ಪೀಡಿತರಿಗೆ ಧನ ಸಹಾಯ, ಕ್ರೀಡಾಕೂಟಗಳಿಗೆ ಧನ ಸಹಾಯ ಅನೇಕ ಕ್ರೀಡಾಪಟುಗಳ ಹುಟ್ಟು ಹಾಕುವಿಕೆ ಇವುಗಳ ಜೊತೆಗೆ ನಮ್ಮ ಸಂಸ್ಥೆಯ ಸುತ್ತ ಮಕ್ಕಳ ಆಟವಾಡುವುದಕ್ಕಾಗಿ ತೊಟ್ಟಿಲು ನಿರ್ಮಾಣ, ಜಾರು ಬಂಡಿ, ದೋಣಿ ಆಟ, ಸಿಂಹಧಾಮ ನಿರ್ಮಾಣ ವ್ಯಾಯಾಮ ಶಾಲೆ, ಸಂಗೀತ ಶಾಲೆ ಇತರೆ ಸಾಮಾಗ್ರಿಗಳಿಂದ ಸಾವಿರಾರು ಮಕ್ಕಳು ಆಟವಾಡುವುದನ್ನು ನೋಡುವುದೇ ಹೆಮ್ಮೆಯ ವಿಷಯದ ಜೊತೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ನಮ್ಮ ಸಂಸ್ಥೆ ಮರುಣೋತ್ತರ ನಿಧಿ ಸ್ಥಾಪಿಸಲಾಗಿದ್ದು ನಮ್ಮ ಸಂಸ್ಥೆಯ ಸದಸ್ಯರು ಮರಣ ಹೊಂದಿದರೆ ಸಂಸ್ಥೆಯಿಂದ ಮರುಣೋತ್ತರ ನಿಧಿಯಿಂದ ಹಣ ಸಹಾಯ ಮಾಡಲಾಗುವುದು ಎಂದರು.


ಶಾಲೆ ದತ್ತು:

ನಮ್ಮ ಸಂಸ್ಥೆ ಹೊಸನಗರದ ಸರ್ಕಾರಿ ಹಿರಿಯ ಬಾಲಕರ ಪಾಠ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಈ ಶಾಲೆಯ ಅಭಿವೃದ್ಧಿ ಮತ್ತು ಶಾಲೆಯ ಯಶಸ್ಸಿಗೆ ಶ್ರಮಿಸಲಾಗುತ್ತಿದೆ ಮುಂದಿನ ದಿನದಲ್ಲಿ ನಮ್ಮ ಈ ಸಂಸ್ಥೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಬಿವೃದ್ಧಿ ಕಾರ್ಯಕ್ರಮದ ಜೊತೆಗೆ ತಾಲ್ಲೂಕಿನ ಜನರಿಗೆ ಸಂಕಷ್ಟದಲ್ಲಿರುವ ಜನರ ಕಷ್ಟ ಸುಖಗಳಲ್ಲಿ ಬಾಗಿಯಾಗಲು ಸಿದ್ದವಿದ್ದು ಇದಕ್ಕೆ ಸಂಘದ ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.


ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಆರ್.ಎಂ. ಮಂಜುನಾಥ ಗೌಡರವರು ಸಂಸ್ಥೆಯ ಏಳಿಗೆಗೆ ಸಂಘದ ಸದಸ್ಯರು ಶ್ರಮಿಸಬೇಕೆಂದರು.
ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಬಿ. ಆರ್ ಪ್ರಭಾಕರ್, ಕಾರ್ಯದರ್ಶಿ ಬಿ.ಎಂ. ಶ್ರೀಧರ್, ಲೆಕ್ಕ ಪರಿಶೋಧಕರಾದ ಎಂ.ಪಿ. ಸುರೇಶ್, ಹೆಚ್.ಬಿ ಕಲ್ಯಾಣಪ್ಪ ಗೌಡ, ಬಿ.ಎಸ್ ಸುರೇಶ, ಎಂ.ವಿ. ಸುರೇಶ, ಹೆಚ್. ಬಿ ಸತ್ಯನಾರಾಯಣ, ಎನ್ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ಎನ್. ದತ್ತಾತ್ರೇಯ ಉಡುಪ, ನಾಗೇಶ್, ಉಮೇಶ್ ಕಂಚುಗಾರ್, ಮಹೇಂದ್ರ, ಎಂ.ಎಸ್. ಶ್ರೀಕಾಂತ, ಕೆ.ಬಿ.ಸತೀಶ, ವ್ಯವಸ್ಥಾಪಕರಾದ ಕಟ್ಟೆ ಸುರೇಶ, ಕೃಷ್ಣಮೂರ್ತಿ, ಚಂದ್ರಮೌಳಿ, ಎರಗಿ ಉಮೇಶ್, ಬಿ.ಜಿ. ನಾಗರಾಜ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಮಂಜುನಾಥ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!