ಪಿಯು ಫಲಿತಾಂಶ | ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇಕಡಾ 97.78 ರಷ್ಟು ಫಲಿತಾಂಶ

0 377

ರಿಪ್ಪನ್‌ಪೇಟೆ: ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್ 226 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 221 ವಿದ್ಯಾರ್ಥಿಗಳು ಉತ್ತೀರ್ಣಾರಾಗುವುದರೊಂದಿಗೆ ಶೇ. 97.78 ರಷ್ಟು ಫಲಿತಾಂಶ ಪಡೆದು ಅತ್ಯುತ್ತಮ ಸಾಧನೆ ಗಳಿಸಿದ್ದು ವಿದ್ಯಾರ್ಥಿಗಳನ್ನು ಪ್ರಾಚಾರ್ಯರು ಮತ್ತು ಉಪನ್ಯಾಸಕ ವೃಂದ ಮತ್ತು ಸಿಡಿಸಿಯವರು ಅಭಿನಂದಿಸಿದ್ದಾರೆ.

ಕಲಾ ವಿಭಾಗದಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 69 ವಿದ್ಯಾರ್ಥಿಗಳು ಉತ್ತೀರ್ಣಾರಾಗಿ ಶೇ. 98.57 ರಷ್ಟು, ವಿಜ್ಞಾನ ವಿಭಾಗದಲ್ಲಿ 85 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 84 ವಿದ್ಯಾರ್ಥಿಗಳು ಉತ್ತೀರ್ಣಾರಾಗಿ ಶೇಕಡಾ 95.77 ರಷ್ಟು, ವಾಣಿಜ್ಯ ವಿಭಾಗದಲ್ಲಿ 71 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 68 ವಿದ್ಯಾರ್ಥಿಗಳು ಉತ್ತೀರ್ಣಾರಾಗಿ 98.82 ರಷ್ಟು ಫಲಿತಾಂಶ ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಭೂಮಿಕಾ 589 ಅಂಕ ಪಡೆದರೆ, ವಾಣಿಜ್ಯ ವಿಭಾಗದಲ್ಲಿ ಇಂಚರಾ 577 ಅಂಕ ಮತ್ತು ಕಲಾ ವಿಭಾಗದಲ್ಲಿ ತುಳಸಿ 578 ಅತಿ ಹೆಚ್ಚು ಆಂಕ ಗಳಿಸುವುದರೊಂದಿಗೆ ಅತ್ಯುತ್ತಮ ಸಾಧನೆ ಮಾಡಿದರಂತೆ.

ಅತ್ಯುನ್ನತ ಶ್ರೇಣಿಯಲ್ಲಿ 22 ಪ್ರಥಮ ದರ್ಜೆ 162 ದ್ವಿತೀಯ ದರ್ಜೆಯಲ್ಲಿ 34 ತೃತೀಯ ದರ್ಜೆಯಲ್ಲಿ 03 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆಂದು ಪ್ರಾಚಾರ್ಯ ಎ. ಮಂಜುನಾಥ  ಮಾಧ್ಯಮದವರಿಗೆ ವಿವರಿಸಿದರು.

Leave A Reply

Your email address will not be published.

error: Content is protected !!