Shivamogga | ಪೌರ ಕಾರ್ಮಿಕರು ಸಲ್ಲಿಸುತ್ತಿರುವ ಸೇವೆ ಅಪಾರ ; ಸಂಸದ ಬಿವೈಆರ್

0 93

ಶಿವಮೊಗ್ಗ : ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರದ ಜನರ ಸ್ವಸ್ಥ ಕಾಪಾಡುವ ಉದ್ದೇಶದಿಂದ ಪೌರ ಕಾರ್ಮಿಕರು ಸಲ್ಲಿಸುತ್ತಿರುವ ಸೇವೆ ಅಪಾರವಾದದ್ದು ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.


ನಗರದ ಕುವೆಂಪು ರಂಗ ಮಂದಿರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ‌ ಅವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪೌರಕಾರ್ಮಿಕರುಗಳು ತಮ್ಮ ಜೀವವನ್ನು
ಪಣಕಿಟ್ಟು ಅಂದಿನ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸಿದ್ದಾರೆ. ಪೌರಕಾರ್ಮಿಕರು ಪ್ರತಿನಿತ್ಯ ಸಲ್ಲಿಸುತ್ತಿರುವ ಸೇವೆಗೆ ಪ್ರತಿಯಾಗಿ ನಾಡಿನ ಪ್ರಧಾನಿಗಳೇ ಕಾಶಿಯಲ್ಲಿ ಪೌರಕಾರ್ಮಿಕರ ಪಾದಪೂಜೆ ಮಾಡಿದ್ದರು ಎಂದು ತಿಳಿಸಿದರು.

ಪೌರ ಕಾರ್ಮಿಕರುಗಳು ಎಂದರೆ ಕೆಲವರು ಈ ಹಿಂದೆ ಮೂಗು ಮುರಿಯುತ್ತಿದ್ದರು. ಕೆಲವರು ಅವರನ್ನು ಕೇವಲವಾಗಿ ಕಾಣುತ್ತಿದ್ದರು. ಸಂವಿಧಾನ‌ ಇಂದು ಪೌರಕಾರ್ಮಿಕರನ್ನ ಗೌರವದಿಂದ ನೋಡಲು ಅವ ಕಾಶ ಕಲ್ಪಿಸಿದೆ. ಪೌರಕಾರ್ಮಿಕರ ನೇಮಕಾತಿ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಏನಾಗಬೇಕು‌ ಅದನ್ನು ಮಾಡಲು ಸಿದ್ದವಿದೆ ಎಂದರು.

ಗ್ರೀನ್ ಸಿಟಿ ಕ್ಲೀನ್ ಸಿಟಿ ಪ್ರಶಸ್ತಿಗೆ ಪೌರಕಾರ್ಮಿಕರು
ಕಾರಣ. ಮುಂದಿನ ದಿನಗಳಲ್ಲಿ ವಿಮಾನದ ಮೂಲಕ ಪೌರ ಕಾರ್ಮಿಕರನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುವುದು ಎಂಬ ಭರವಸೆ ನೀಡಿದರು.
ಈ ಹಿಂದೆ ಸಚಿವರಾಗಿದ್ದ ಈಶ್ವರಪ್ಪನವರು ಪೌರಕಾರ್ಮಿಕರಿಗೆ ಪ್ರವಾಸ ಕಲ್ಪಿಸಿದ್ದರು. ರೈಲು ಮತ್ತು ಇತರೆ ವಾಹನಗಳಲ್ಲಿ ಪ್ರವಾಸ ಮಾಡಿಸಿದ್ದರು. ಆಗ ವಿಮಾನ ಇನ್ನೂ ಆರಂಭವಾಗಿರಲಿಲ್ಲ ಮುಂದಿನ ದಿನಗಳಲ್ಲಿ ವಿಮಾನಗಳಲ್ಲಿ ಪ್ರವಾಸ ಕಳುಹಿಸುವುದಾಗಿ ಸಂಸದರು ಭರವಸೆ ನೀಡಿದರು.

ಇದೇ ವೇಳೆ 10 ಜನ ಪೌರ ಕಾರ್ಮಿಕರಿಗೆ
ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ‌ ಚನ್ನಬಸಪ್ಪ, ಪಾಲಕೆ ಆಯುಕ್ತ ಶಿವಕುಮಾರ್, ಸದಸ್ಯರಾದ ಯೋಗೀಶ್, ರಮೇಶ್ ಹೆಗ್ಡೆ, ಸುರೇಖಾ ಮುರುಳೀಶರ್, ಸುನಿತಾ ಅಣ್ಣಪ್ಪ, ರೇಖಾ
ರಂಗನಾಥ್, ಆಯುಕ್ತ ಮಾಯಣ್ಣಗೌಡ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಗೋವಿಂದಪ್ಪ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!