ಆರೋಗ್ಯವಂತ ಸದೃಢ ದೇಹ ಹೊಂದಲು ಕ್ರೀಡೆ ಸಹಕಾರಿ ; ಬಿ.ಜಿ. ಚಂದ್ರಮೌಳಿ

0 422

ರಿಪ್ಪನ್‌ಪೇಟೆ : ಆರೋಗ್ಯವಂತ ಸದೃಢ ದೇಹವನ್ನು ಹೊಂದಲು ಕ್ರೀಡೆ ಎಂಬುದು ಸಹಕಾರಿಯಾಗಿದ್ದು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಹೊಸನಗರ ತಾಪಂ ಮಾಜಿ ಸದಸ್ಯ ಬಿ.ಜಿ ಚಂದ್ರಮೌಳಿ ಹೇಳಿದರು.

ಅವರು ಇಂದು ಫ್ರೆಂಡ್ಸ್ ಕೋಡೂರು ಮಲೆನಾಡು ಆಟಗಾರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಸದೃಢ ದೇಹ ಮತ್ತು ಸದೃಢ ಮನಸ್ಸು ಇರಬೇಕಾದರೆ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಇದರಿಂದ ಉತ್ತಮ ಆರೋಗ್ಯವಂತರಾಗಿ ಇರಬಹುದು. ಕ್ರೀಡೆ ಎಂಬುದು ಕೇವಲ ಅದೊಂದು ಆಟವಲ್ಲಾ ಇಡೀ ಜೀವನವನ್ನು ಬದಲಾಯಿಸುವ ಶಕ್ತಿ ಅದರಲ್ಲಿ ಅಡಗಿದೆ. ಜನರು ಕ್ರೀಡೆಯ ಮೂಲಕ ಜಗತ್ತಿನಲ್ಲಿ ಪ್ರಸಿದ್ದತೆಗೊಂಡಿದ್ದಾರೆ ಮತ್ತು ಉತ್ತಮ ಆರೋಗ್ಯವಂತರಾಗಿ ಬಾಳುತ್ತಿದ್ದಾರೆ. ಕ್ರೀಡೆಯಿಂದ ಜ್ಞಾಪಕ ಶಕ್ತಿಯೂ ಕೂಡಾ ವೃದ್ದಿಗೊಳ್ಳಲಿದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಚೈತನ್ಯ ತುಂಬುವಂತಹ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಬೇಕೆಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟ ಪ್ರತಿನಿಧಿಸಿದ ಕೋಡೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕೋಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಕಲಗೋಡು, ಉಪಾಧ್ಯಕ್ಷ ಸುಧಾಕರ್, ಸದಸ್ಯ ಜಯಪ್ರಕಾಶ್, ಗ್ರಾಪಂ ಮಾಜಿ ಅಧ್ಯಕ್ಷರ ಜಯಂತ್, ರಾಘು ಪೂಜಾರಿ, ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ವೇದಾಂತ್, ರಾಮಣ್ಣ, ಲಕ್ಷ್ಮಿ ಮಲ್ನಾಡ್ ಬೇಕರಿ ಪ್ರದೀಪ್, ರಂಜಿತ್, ವಿಕಾಸ್ ಕುನ್ನೂರು, ಪುರುಷೋತ್ತಮ ಮತ್ತಿತ್ತರು ಹಾಜರಾಗಿದ್ದರು.

Leave A Reply

Your email address will not be published.

error: Content is protected !!