ಚಲಿಸುತ್ತಿದ್ದ ಕಾರಿನ ಮೇಲೆ ತೆಂಗಿನಮರ, ವಿದ್ಯುತ್ ಕಂಬ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು !

0 683

ಚಲಿಸುತ್ತಿದ್ದ ಕಾರಿನ ಮೇಲೆ ತೆಂಗಿನಮರ, ವಿದ್ಯುತ್ ಕಂಬ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು !

ತರೀಕೆರೆ : ಭಾರಿ ಬಿರುಗಾಳಿಗೆ ತೆಂಗಿನ ಮರ, ವಿದ್ಯುತ್ ಕಂಬ ಚಲಿಸುತ್ತಿದ್ದ ಓಮ್ನಿ ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತರೀಕೆರೆ ಸಮೀಪ ಲಿಂಗದಹಳ್ಳಿ ಬಳಿ ನಡೆದಿದೆ.

ಚಿಕ್ಕಮಗಳೂರು ತಾಲೂಕು ಮಾಚೇನಹಳ್ಳಿಯ ದೇವರಾಜಾಚಾರ್ (38) ಮೃತ ದುರ್ಧೈವಿ. ಕಡೂರು ಸಮೀಪದ ಮತಿಘಟ್ಟದಿಂದ ಐದು ಮಂದಿ ತೆರಳುತ್ತಿದ್ದ ವೇಳೆ ಲಿಂಗದಹಳ್ಳಿ ಬಳಿ ಬಿರುಗಾಳಿಯಿಂದಾಗಿ ತೆಂಗಿನಮರ ಮತ್ತು ವಿದ್ಯುತ್ ಕಂಬ ವಾಹನದ ಮೇಲೆ ಬಿದ್ದಿವೆ. ಕಾರಿನಲ್ಲಿದ್ದ ದೇವರಾಜಾಚಾರ್ ಮೃತಪಟ್ಟಿದ್ದು, ಕಡೂರು ತಾಲೂಕು ಎರೆಹಳ್ಳಿಯ ಹನುಮಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳು ಹನುಮಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ವ್ಯಕ್ತಿ ಗಂಭೀರ :
ಇನ್ನು ಮೂಡಿಗೆರೆ ತಾಲೂಕಿನ ಬೆಟ್ಟಗೆರೆಯ ಗದ್ಗೋಡು ಗ್ರಾಮದ ಲಕ್ಷ್ಮಣ ಶೆಟ್ಟಿ ಎಂಬುವವರ ಮನೆಗೆ ಮಂಗಳವಾರ ರಾತ್ರಿ ಸಿಡಿಲು ಬಡಿದಿದ್ದು, ಲಕ್ಷ್ಮಣ ಶೆಟ್ಟಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಹತ್ತು ದಿನಗಳ ಹಿಂದೆ ನರಸಿಂಹರಾಜಪುರ ತಾಲೂಕಿನ ಅರಳಿಕೊಪ್ಪದ ನಿವಾಸಿ ಶಂಕರ್ (48) ತೋಟಕ್ಕೆ ಹೋಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದರು.

Leave A Reply

Your email address will not be published.

error: Content is protected !!