ಅಯೋಧ್ಯೆ ರಾಮ ಪ್ರತಿಷ್ಟಾಪನಾ ಮಹೋತ್ಸವದಂದು ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಶ್ರೀ ರಾಮತಾರಕ ಹವನ ಧಾರ್ಮಿಕ ಕಾರ್ಯಕ್ರಮ

0 260

ರಿಪ್ಪನ್‌ಪೇಟೆ: ಅಯೋಧ್ಯಯಲ್ಲಿ ಜನವರಿ 22ರ ಸೋಮವಾರದಂದು ಆಯೋಜಿಸಲಾಗಿರುವ ಶ್ರೀರಾಮಲಲ್ಲಾ ಪ್ರತಿಷ್ಟಾಪನಾ ಮಹೋತ್ಸವದ ಅಂಗವಾಗಿ ರಿಪ್ಪನ್‌ಪೇಟೆ ಶ್ರೀ ಸಿದ್ದಿವಿನಾಯ ಸ್ವಾಮಿ ದೇವಸ್ಥಾನ ಸಮಿತಿಯವರು ಹಾಗೂ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯವರು ಲೋಕಕಲ್ಯಾಣಾರ್ಥವಾಗಿ ಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ “ಶ್ರೀರಾಮತಾರಕ’’ ಹವನ ಹಾಗೂ ಅಯೋಧ್ಯೆಯಲ್ಲಿ ನಡೆಯುವ ಶ್ರೀ ರಾಮಲಲ್ಲಾ ಪ್ರತಿಷ್ಟಾಪನಾ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಜೀರ್ಣೋದ್ದಾರ ಸೇವಾ ಸಮಿತಿ ಅಧ್ಯಕ್ಷ ಎನ್.ಸತೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಅಂದು ಬೆಳಗ್ಗೆ 7 ಗಂಟೆಗೆ “ಶ್ರೀರಾಮತಾರಕ‘’ ಹವನ 9.30 ಕ್ಕೆ ಪೂರ್ಣಾಹುತಿ,10 ಗಂಟೆಯಿಂದ 11.30 ವರೆಗೆ ಶ್ರೀರಾಮ ಭಜನೆ, 11.30 ರಿಂದ 12.30 ವರೆಗೆ ಶ್ರೀರಾಮದೇವರ ಪ್ರತಿಷ್ಟಾಪನಾ ನೇರ ದೃಶ್ಯಾವಳಿ ಪ್ರದರ್ಶನ ನಂತರ ಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಆನ್ನಪೂರ್ಣೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ತೀರ್ಥ ಪ್ರಸಾದ ಸಾಮೂಹಿಕ ಅನ್ನ ಸಂತರ್ಪಣೆ ಜರುಗಲಿದ್ದು ಸಕಲ ಭಕ್ತಾಧಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

ಆಂಜನೇಯ ದೇವಸ್ಥಾನ ಸ್ವಚ್ಚಗೊಳಿಸಿದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ

ರಿಪ್ಪನ್‌ಪೇಟೆ: ದೇಶದ ಪ್ರಧಾನ ಮಂತ್ರಿ ಮೋದಿಜಿಯವರು ದೇವಸ್ಥಾನಗಳ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ದೇಶದ ಎಲ್ಲಾ ಹಳ್ಳಿಗಳ ದೇವಸ್ಥಾನಗಳ ಸ್ವಚ್ಚತಾ ಕಾರ್ಯಕ್ಕೆ ಕರೆ ನೀಡಿದರ ಮೇರೆಗೆ ಹೊಸನಗರ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ತಮ್ಮ ಸ್ವಗ್ರಾಮ ಆಲವಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ಮಾಡಿದರು.

Leave A Reply

Your email address will not be published.

error: Content is protected !!