ಮನೆ ಟೆರೇಸ್ ಮೇಲಿನ ಸಿಂಟೆಕ್ಸ್ ಸ್ಟ್ಯಾಂಡಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

0 804

ಸಾಗರ : ಮನೆಯ ಟೆರೇಸ್‌ ಮೇಲಿನ ಸಿಂಟೆಕ್ಸ್ ಸ್ಟ್ಯಾಂಡಿಗೆ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನೆಹರುನಗರದಲ್ಲಿ ನಡೆದಿದೆ.

ಮಧುಸೂದನ್ (55) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಸಾಗರದ ಹೆಸರಾಂತ ಬೇಕರಿ ಒಂದರ ಉದ್ಯೋಗಿಯಾಗಿದ್ದ ಮಧುಸೂದನ್ ಇತ್ತಿಚೆಗೆ ಕೆಲಸ ಬಿಟ್ಟಿದ್ದ ಎನ್ನಲಾಗಿದೆ.

ಬೇಕರಿಯಲ್ಲಿ ಕೆಲಸ ಬಿಟ್ಟ ಬಳಿಕ ಬೇರೆಡೆ ಕೆಲಸ ಸಿಕ್ಕಿರಲಿಲ್ಲ. ಉದ್ಯೋಗಕ್ಕಾಗಿ ಶಿರಸಿ ಹೋಗಬೇಕಾಗಿತ್ತು. ಉದ್ಯೋಗ ಅರಸಿಕೊಂಡು ಶಿರಸಿಗೆ ಹೋಗಲಾಗದೆ, ಸ್ಥಳೀಯವಾಗಿ ಯಾವುದೇ ಉದ್ಯೋಗವಿಲ್ಲದೆ ಜೀವನದಲ್ಲಿ ಜುಗುಪ್ಸೆಗೊಂಡು ತನ್ನ ಸಂಬಂಧಿಕರ ಮನೆಯ ಟೆರೇಸ್ ಮೇಲಿನ ಸಿಂಟೆಕ್ಸ್ ಗೆ ಸ್ಟ್ಯಾಂಡಿಗೆ ನೇಣು ಬಿಗಿದುಕೊಂಡುಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಟೆರೇಸ್ ಮೇಲೆ ಮೃತದೇಹ ಕಂಡು ಗಾಬರಿಗೊಂಡ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಸಾಗರಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!