ತಂದೆ ಸಾವಿನ ದುಃಖದಲ್ಲಿಯೇ ಹಸೆಮಣೆ ಏರಿದ ಸಹೋದರಿಯರು

0 65

ಸಾಗರ: ತಂದೆಯ ಸಾವಿನ ದುಃಖದಲ್ಲಿ ಹಸೆಮಣೆ ಏರಿದ ಸಹೋದರಿಯರು ಸಮಾಜಕ್ಕೆ ಆದರ್ಶವಾಗಿದ್ದಾರೆ. ಮದುವೆ ಎಂದರೆ ಬಂಧುಗಳು ಸ್ನೇಹಿತರು ಒಂದಾಗಿ ಸಂಭ್ರಮದಿಂದ ನಡೆಯುವ ಕಾರ್ಯ. ಆದರೆ ದುಃಖದಲ್ಲಿಯೇ ಹಸೆಮೆಣೆ ಏರಿದ ಪುತ್ರಿಯರು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಬುಧವಾರ ಆನಂದಪುರ ಸಮೀಪದ ಕೆಂಜಿಗಾಪುರದ ಸಮುದಾಯ ಭವನದಲ್ಲಿ ಬನವಾಸಿಯ ಮೂಲದವರಾದ ಮಂಜುನಾಥಗೌಡ ಎಂಬುವರ ಇಬ್ಬರು ಪುತ್ರಿಯರ ಮದುವೆ ನಿಶ್ಚಯವಾಗಿತ್ತು. ತಂದೆ ತನ್ನ ಇಬ್ಬರ ಹೆಣ್ಣು ಮಕ್ಕಳನ್ನು ಆನಂದಪುರ ಸಮೀಪದ ಚೆನ್ನಕೊಪ್ಪ ಗ್ರಾಮದ ಹೆಣ್ಣುಮಕ್ಕಳ ತಾಯಿಯ ತವರೂರಿಗೆ ಬಂದಿದ್ದು, ನಡೆಯಬೇಕಾದ ಮದುವೆಯ ತಯಾರಿಗಾಗಿ ಹೆಣ್ಣು ಮಕ್ಕಳ ತಂದೆ ಮಂಜುನಾಥಗೌಡ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಮಂಜುನಾಥಗೌಡ ಸ್ಥಳದಲ್ಲೇ ಮೃತಪಟ್ಟಿದ್ದರು.

ಸಂಭ್ರಮಕ್ಕೆ ಸಾಕ್ಷಿಯಾಗಬೇಕಿದ್ದ ಮದುವೆಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಇಬ್ಬರೂ ಪುತ್ರಿಯರ ಅಜ್ಜ (ತಾಯಿಯ ತಂದೆ) ರುದ್ರಪ್ಪ ಗೌಡರು ಮೊಮ್ಮಕ್ಕಳ ಮುಂದಿನ ಭವಿಷ್ಯವನ್ನು ಚಿಂತಿಸಿ ನಿಶ್ಚಿತವಾದ ದಿನದಂದು ಮೊಮ್ಮಕ್ಕಳ ಮದುವೆ ಮಾಡುವುದಾಗಿ ಕುಟುಂಬದೊಂದಿಗೆ ಚರ್ಚಿಸಿ ತೀರ್ಮಾನಿಸಿದರು. ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಮುತ್ತಿನಹಳ್ಳಿ ಗ್ರಾಮದ ಶಿವಾನಂದ ಪಾಟೀಲ್‌ ಅವರ ಇಬ್ಬರ ಮಕ್ಕಳಾದ ವಿಶ್ವನಾಥ್‌ ಪಾಟೀಲ, ಶ್ರೀನಾಥ್‌ ಪಾಟೀಲ ಇವರೊಂದಿಗೆ ಮಂಜುನಾಥ್‌ಗೌಡರ ಇಬ್ಬರ ಪುತ್ರಿಯರಾದ ಪಲ್ಲವಿ ಮತ್ತು ಪೂಜಾ ಇವರುಗಳ ಮದುವೆ ನಿಶ್ಚಯವಾಗಿತ್ತು.

ಅದರಂತೆ ಹೆಣ್ಣು ಮಕ್ಕಳ ಅಜ್ಜ ವರನ ಕಡೆಯವರಿಗೆ ದೂರವಾಣಿ ಕರೆ ಮಾಡಿ ನಿಶ್ಚಯದಂತೆ ಮದುವೆ ನಡೆಸಬೇಕು ಎಂದು ಕೇಳಿಕೊಂಡಾಗ ವರನ ಕಡೆಯವರ ಸಮ್ಮತಿಯೊಂದಿಗೆ ರುದ್ರಪ್ಪ ಗೌಡರು ನಮ್ಮ ಕುಟುಂಬ ಹಾಗೂ ಬಂಧುಗಳಿಗೆ ದೂರವಾಣಿಯ ಮೂಲಕ ನಿಶ್ಚಿಮವಾದಂತೆ ಮದುವೆ ನಡೆಯಲಿದೆ ಎಲ್ಲರೂ ಬರಬೇಕೆಂದು ತಿಳಿಸಿದ್ದರು. ಈ ಮದುವೆಗೆ ನೂರಾರು ಜನರು ಆಗಮಿಸಿದ್ದು, ವಧು-ವರರನ್ನು ಆಶೀರ್ವದಿಸಿದರು. ಮದುವೆ ಬಂದಂತಹ ಬಂಧುಗಳು ಸ್ನೇಹಿತರುಗಳು ವಧು-ವರರಿಗೆ ಶುಭ ಹಾರೈಸಿದರು.

Leave A Reply

Your email address will not be published.

error: Content is protected !!