ಚಿಪ್ಸ್ ಪ್ಯಾಕೆಟ್‌ನಲ್ಲಿ ಗಾಂಜಾ ತಂದಿದ್ದವನ ಬಂಧನ !

0 36

ಶಿವಮೊಗ್ಗ : ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಸಂಜೆ ಕೈದಿಯನ್ನು ಭೇಟಿ ಮಾಡುವ ನೆಪದಲ್ಲಿ ಬಂದಿದ್ದ ಆತನ ಸ್ನೇಹಿತನ ಬಳಿ ಗಾಂಜಾ ಪತ್ತೆಯಾಗಿದೆ.

ಚಿಪ್ಸ್ ಪ್ಯಾಕೆಟ್‌ನಲ್ಲಿ ಗಾಂಜಾ ತುಂಬಿಕೊಂಡು ಬಂದಿದ್ದ ವ್ಯಕ್ತಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ಕೇಂದ್ರ ಕಾರಾಗೃಹಕ್ಕೆ ವಿಚಾರಣಾಧೀನ ಕೈದಿಯಾಗಿ 10 ದಿನಗಳ ಹಿಂದೆ ಬಂದಿದ್ದ ಅಲ್ತಾಫ್ ನ್ನ ಭೇಟಿ ಮಾಡಲು ಸ್ನೇಹಿತ ಮೊಹಮ್ಮದ್ ಮುಸ್ತಾಫ ಮತ್ತು ಕಾಶೀಪುರದ ದಿಲೀಪ್ ಎಂಬುವವರು ಸೋಗಾನೆಯ ಕಾರಾಗೃಹಕ್ಕೆ ಬಂದಿದ್ದಾರೆ. ಅಲ್ಲಿನ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.
ಮುಸ್ತಫಾ ಶಿವಮೊಗ್ಗದ ಗೋಪಾಳದ ನಿವಾಸಿ. ಬೆಂಗಳೂರಿನ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ತಪಾಸಣೆ ವೇಳೆ ಗಾಂಜಾ ಪತ್ತೆಯಾಗುತ್ತಿದ್ದಂತೆಯೇ ದಿಲೀಪ್ ಓಡಿಹೋಗಿದ್ದಾನೆ ಎನ್ನಲಾಗಿದೆ.

ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಜೈಲ್ ಸೂಪರಿಂಟೆಂಡೆಂಟ್ ಡಾ.ಅನಿತಾ ದೂರು ದಾಖಲಿಸಿದ್ದಾರೆ. ಮೊಹಮ್ಮದ್ ಮುಸ್ತಫಾನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ದಿಲೀಪ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

Leave A Reply

Your email address will not be published.

error: Content is protected !!