ವಿದ್ಯಾನಿಧಿಗೆ ಶಿವಮೊಗ್ಗದಲ್ಲಿ ನಾಳೆ ಅಧಿಕೃತ ಚಾಲನೆ ; ಬಿ‌.ಜಿ ನಾಗರಾಜ್

0 362

ಹೊಸನಗರ : ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿರುವ 5 ಭರವಸೆಯಲ್ಲಿ ಅಧಿಕಾರಕ್ಕೆ ಬಂದ ನಂತರ ಈಗಾಗಲೇ 4 ಭರವಸೆಯನ್ನು ಈಡೇರಿಸಿದ್ದು ಜ.12 ರ ಶುಕ್ರವಾರದಂದು ವಿದ್ಯಾವಂತ ಯುವಕರಿಗೆ ಯುವನಿಧಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರವು ಮುಂದಾಗಿದ್ದು, ಇದಕ್ಕೆ ಅಧಿಕೃತವಾಗಿ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಜಿ ನಾಗರಾಜ್ ತಿಳಿಸಿದರು.

ಪಟ್ಟಣದ ಕಾಂಗ್ರೇಸ್ ಕಛೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನುಡಿದಂತೆ ನಡೆವ ಸರ್ಕಾರವೆಂದರೆ ಅದು ಕಾಂಗ್ರೆಸ್ ಪಕ್ಷ. ಈ ಹಿಂದೆ ರಾಜ್ಯದ ಜನತೆಗೆ ನೀಡಿರುವ 5 ಭರವಸೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದ್ದು, ಈಗಾಗಲೇ ರಾಜ್ಯದ ಅನೇಕರಿಗೆ ಈ ಯೋಜನೆ ಸಹಕಾರಿಯಾಗಿದೆ. ಇವುಗಳಲ್ಲಿ ಮತ್ತೊಂದಾದ ಯುವ ನಿಧಿ ಯೋಜನೆಯು ಜ.12ರ ಶುಕ್ರವಾರದಂದು ಸ್ವಾಮಿ ವಿವೇಕಾನಂದರ ಜನ್ಮದಿನದಂದು ವಿದ್ಯಾವಂತ ಯುವಕರಿಗಾಗಿ ಯುವನಿಧಿಯನ್ನು ಜಾರಿಗೊಳಿಸಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರು, ಶಾಸಕರು, ಕಾಂಗ್ರೆಸ್ ಮುಖಂಡರಿಂದ ಇದಕ್ಕೆ ಅಧಿಕೃತವಾಗಿ ಶಿವಮೊಗ್ಗದಲ್ಲಿ ಚಾಲನೆ ನೀಡಲಾಗುವುದು ಎಂದರು. 

ಬಿಪಿಎಲ್ ಪಡಿತರರಿಗೆ 10 ಕೆ ಜಿ ಉಚಿತ ಅಕ್ಕಿ ನೀಡುವ ಯೋಜನೆಯಲ್ಲಿ 5 ಕೆ ಜಿ ಅಕ್ಕಿ ಲಭ್ಯವಿರದ ಕಾರಣ ಬಿ ಪಿ ಎಲ್ ಪಡಿತರದಾರರ ಖಾತೆಗೆ 5 ಕೆ ಜಿ ಗೆ ತಗಲುವ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿದ್ದು, ಬಾಡಿಗೆ ಅಥವಾ ಸ್ವಂತ ಮನೆಯುಳ್ಳವರಿಗೆ ಉಚಿತ ವಿದ್ಯುತ್, ಮಹಿಳೆಯರು ರಾಜ್ಯದಲ್ಲಿ ಸರ್ಕಾರಿ ಬಸ್‌ನಲ್ಲಿ ಯಾವುದೇ ಸ್ಥಳಕ್ಕೆ ಹೋದರು ಉಚಿತ ಪ್ರಯಾಣ, ಮನೆಯೊಡತಿಗೆ ಗೃಹಲಕ್ಷ್ಮೀ ಯೋಜನೆಯಡಿ 2000 ರೂ. ಪ್ರತಿ ಮಾಸಿಕ ನೀಡಲಾಗುತ್ತಿದೆ. ಕೊನೆಯದಾಗಿ ಯುವನಿಧಿಯನ್ನು ಜ.12ರ ಶುಕ್ರವಾರದಂದು ವಿದ್ಯಾವಂತ ಯುವಕರಿಗೆ ಯುವನಿಧಿಯನ್ನು ಜಾರಿಗೊಳಿಸಲು ಮುಂದಾಗಿದ್ದು, ಇದಕ್ಕೆ ಅಧಿಕೃತವಾಗಿ ಶಿವಮೊಗ್ಗದಲ್ಲಿ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯುರವರು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಸೇರಿದಂತೆ ಪಕ್ಷದ ಅನೇಕ ಮುಖಂಡರು ಆಗಮಿಸಿ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯಿಂದ ಪ್ರಸಕ್ತ ಸಾಲಿನ ಡಿಪ್ಲೋಮಾ ವಿದ್ಯಾರ್ಥಿಗಳಿಗೆ, ಪದವಿ ಪಡೆದ ವಿದ್ಯಾರ್ಥಿಗಳಿಗೆ 6 ತಿಂಗಳು ಉದ್ಯೋಗವಿಲ್ಲದವರಿಗೆ ಈ ಯೋಜನೆಯು ಲಾಭವಾಗಲಿದೆ. ಆದ್ದರಿಂದ ಶುಕ್ರವಾರದಂದು ನಡೆಯುವ ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಲಿರುವ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ, ಪಕ್ಷದ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಸ್‌ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಪಪಂ ಸದಸ್ಯ ಅಶ್ವಿನಿ ಕುಮಾರ್, ಶಾಹಿನಾ ನಾಸೀರ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಬಲರಾವ್, ಟೌನ್ ಘಟಕದ ಮಾಜಿ ಅಧ್ಯಕ್ಷ ಬಾಬು ಕಾಮತ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದ್ರಮೌಳಿ, ಸದಾಶಿವ ಶ್ರೇಷ್ಠಿ, ಕೋರ್ ಕಮಿಟಿ ಸದಸ್ಯಎಂ.ಪಿ.ಸುರೇಶ್, ಟೌನ್ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾ, ಅಲ್ಪ ಸಂಖ್ಯಾತ ಮುಖಂಡ ಇಕ್ಬಾಲ್ ಅನ್ಸರ್, ಚಂದ್ರಕಲಾ ನಾಗರಾಜ್, ನೋರ ಮೆಟಲ್ಡಾ ಸಿಕ್ವೇರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!