ಭಾರತ- ಪಾಕ್ ಯುದ್ಧದಲ್ಲಿ ಸೆಣೆಸಾಡಿದ್ದ ಟ್ಯಾಂಕರ್ ಮಲೆನಾಡಿಗೆ

0 34

ಶಿವಮೊಗ್ಗ : ನಗರಕ್ಕೆ ಇಂದು ಸಂತೋಷದದಿನವಾಗಿದೆ. ಸ್ವಾತಂತ್ರ್ಯದ 75 ರ ಸಂಭ್ರಮದಲ್ಲಿರುವ ನಾವು ಬಾಂಗ್ಲಾ ಮತ್ತು ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡ ಟಿ-55 ನಿಷ್ಕ್ರೀಯ ಯುದ್ಧ ಟ್ಯಾಂಕರ್ ಅನ್ನು ಇಂದು ನಗರಕ್ಕೆ ತರಲಾಗಿದೆ.


ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಹಾನಗರ ಪಾಲಿಕೆ ಮತ್ತು ನಿವೃತ್ತ ಸೈನಿಕರ ಸಂಘದಿಂದ ಟ್ಯಾಂಕರ್ ಅನ್ನು ಅದ್ಧೂರಿ ಯಾಗಿ, ಸಂಭ್ರಮದಿಂದ ಬರಮಾಡಿ ಕೊಳ್ಳಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ‌ ಎಸ್.ಎನ್. ಚನ್ನಬಸಪ್ಪ, 2020 ರಲ್ಲಿ ರಕ್ಷಣಾ‌ ಇಲಾಖೆಗೆ ನಿಷ್ಕಿçಯ ಯುದ್ಧ ಟ್ಯಾಂಕರ್ ಅಥವಾ ವಿಮಾನಗಳನ್ನು ನೀಡುವಂತೆ ಮನವಿ ಮಾಡಿದ್ದೆವು. ಈಗ ಅದಕ್ಕೆ ಫಲ ಸಿಕ್ಕಿದೆ. ಸೈನಿಕ ಇಲಾಖೆಯ ಉಪನಿರ್ದೇಶಕ ಹಿರೇಮಠ್ ಅವರು ವಿಶೇಷ ಆಸಕ್ತಿ ವಹಿಸಿದ್ದರು. ಪೂನಾದ ರಕ್ಷಣಾ‌ ಕಾರ್ಯಾಲಯದಿಂದ ಮೂರು ದಿನ ಪ್ರಯಾಣ ಮಾಡಿ ಯುದ್ಧ ಟ್ಯಾಂಕರ್ ನಗರಕ್ಕೆ ಆಗಮಿಸಿದೆ. ಇದು 1971 ರ ಬಾಂಗ್ಲಾ ಯುದ್ಧದ ಗೆಲುವಿಗೆ ಕಾರಣವಾಗಿತ್ತು. ಈಗ ಇಲ್ಲಿ
ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.


ಇದನ್ನು ಎಲ್ಲಿ ಸ್ಥಾಪಿಸಬೇಕೆಂದು ಇನ್ನೂ ಅಂತಿಮ‌ ತೀರ್ಮಾನವಾಗಿಲ್ಲ. ಸದ್ಯದಲ್ಲೇ ಇನ್ನೊಂದು ನಿಷ್ಕ್ರೀಯ
ವಿಮಾನ ಕೂಡ ಬರಲಿದ್ದು, ಎಂ.ಆರ್.ಎಸ್. ವೃತ್ತ ಅಥವಾ ಫ್ರೀಡಂ ಪಾರ್ಕ್ ಅಥವಾ ಐಬಿ ಸರ್ಕಲ್ ನಲ್ಲಿ ಸ್ಥಾಪಿಸಲು ಯೋಚನೆ ಇದೆ ಎಂದರು.


ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ‌ ಉಮೇಶ್ ಬಾಪಟ್ ಮಾತನಾಡಿ, ನಮಗೆಲ್ಲರಿಗೂ ಇಂದು ಸಂಭ್ರಮದ ದಿನವಾಗಿದೆ. ಮಾಜಿ ಸೈನಿಕರ ಸಂಘ ಇದನ್ನು ತರಲು ತುಂಬಾ ಪ್ರಯತ್ನ ಮಾಡಿತ್ತು.‌ ಯುವಕ, ಯುವತಿಯರಿಗೆ ಇದೊಂದು ಆಕರ್ಷಣೆ ಮತ್ತು ಪ್ರೇರಣೆಯಾಗಿದೆ ಎಂದರು.


ಈ ಸಂದರ್ಭದಲ್ಲಿ ಶಾಸಕರಾದ ಎಸ್. ರುದ್ರೇಗೌಡ, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮಿ ಶಂಕರ್ ನಾಯ್ಕ್, ಸರ್ಕಾರಿ‌ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ವಿಶ್ವನಾಥ್, ಪ್ರಭು, ಮಂಜುನಾಥ್, ಅನಿತಾ ರವಿಶಂಕರ್, ಇತರರಿದ್ದರು.

Leave A Reply

Your email address will not be published.

error: Content is protected !!