ಶರಾವತಿ ಮುಳಗಡೆ ಸಂತ್ರಸ್ತರ ಹೆಸರಿನಲ್ಲಿ ರಾಜಕೀಯ ಮಾಡಿದ ಮುಳುಗಡೆ ನಾಯಕನಿಗೆ ನಾಚಿಕೆಯಾಗಬೇಕು ; ಬೇಳೂರು ಗೋಪಾಲಕೃಷ್ಣ

0 40

ರಿಪ್ಪನ್‌ಪೇಟೆ: ಕಳೆದ ಹಲವಾರು ವರ್ಷಗಳಿಂದ ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ರಾಜಕೀಯ ಮಾಡಿದ ಮಾಜಿ ಶಾಸಕ ಹರತಾಳು ಹಾಲಪ್ಪ ಮುಳುಗಡೆ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಅನ್ಯಾಯ ಎಸಗಿದ ಮುಳುಗಡೆ ನಾಯಕನಿಗೆ ನಾಚಿಕೆಯಾಗಬೇಕು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದರು.


ಅರಸಾಳು ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಆಯೋಜಿಸಲಾದ ಮತದಾರರಿಗೆ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರ ಅಭಿಮಾನಿಗಳ ಅಭಿನಂದನೆ ಸ್ವೀಕರಿಸಿ ಮಾತನಾಡಿ, ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಆಡಳಿತಾವಧಿಯಲ್ಲಿ ಭಾರಿ ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿ, ಕೆ.ಎಸ್.ಈಶ್ವರಪ್ಪನವರಂತಹ ಹರಕು ಬಾಯಿನ ವ್ಯಕ್ತಿಗೆ ಟಿಕೆಟ್ ನೀಡದೆ ಇರುವುದರಿಂದಾಗಿ ಜಿಲ್ಲೆಯಲ್ಲಿ ಶಾಂತಿ ನೆಲೆಸುವಂತಾಗಿದೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ 13 ಸಾವಿರ ಶಾಲಾ ಶಿಕ್ಷಕರ ಕೊರತೆ ಇದ್ದು ಅವರ ನೇಮಕಾತಿಯಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣದಿಂದಾಗಿ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 80ಕ್ಕೂ ಅಧಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಕ್ಕೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.


ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಮತ್ತು ನಾನು ಈ ಹಿಂದೆ ಮುಳುಗಡೆ ರೈತರ ಪರ ಪಾದಯಾತ್ರೆ ನಡೆಸಿದ್ದು ಈ ಬಾರಿಯ ಅಧಿವೇಶನದ ಸಂದರ್ಭದಲ್ಲಿ ಈ ವಿಚಾರವಾಗಿ ಶಾಸನ ಸಭೆಯಲ್ಲಿ ಧ್ವನಿ ಎತ್ತಿ ಪರಿಹಾರ ಕಲ್ಪಿಸುವ ಬಗ್ಗೆ ಗಮನಸೆಳೆಯುವುದಾಗಿ ತಿಳಿಸಿ, ಜನರ ಸಮಸ್ಯೆಗೆ ಸ್ಪಂದಿಸುವ ನಮ್ಮ ರಾಜಕೀಯಗುರುಗಳಾದ ಬಂಗಾರಪ್ಪಾಜೀಯವರ ಆಶಯದಂತೆ ನಾವು ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.


ಯಾರು ಸಮಸ್ಯೆಗಳನ್ನು ಹೊತ್ತು ನನ್ನ ಬಳಿ ಬರುವಾಗ ಮುಖಂಡರ ಜೊತೆ ಬರಬೇಡಿ ನೇರವಾಗಿ ಬನ್ನಿ ಎಂದು ಹೇಳಿ, ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಯನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.


ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿ.ಪಂ.ಮಾಜಿ ಸದಸ್ಯ ಬಂಡಿ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಮುಖಂಡರಾದ ಜಯಶೀಲಪ್ಪಗೌಡ ಹರತಾಳು, ಬಿ.ಜಿ. ಚಂದ್ರುಮೌಳಿಗೌಡ, ಎರಗಿ ಉಮೇಶ್, ಮಹೇಂದ್ರ ಬುಕ್ಕಿವರೆ, ವಾಸುದೇವ, ರಘುಪತಿ, ಉಮಾಕರ, ಡಿ.ಈ.ಮಧುಸೂದನ್, ರವೀಂದ್ರ ಕೆರೆಹಳ್ಳಿ, ತಿಮ್ಮನಾಯ್ಕ, ಪರಮೇಶ, ಚಂದ್ರಶೇಖರ ಮಳವಳ್ಳಿ, ಸಣ್ಣಕ್ಕಿ ಮಂಜು, ಉಮೇಶ, ಶಿವಪ್ಪ ಸೂಡೂರು, ಗಾಯಿತ್ರಿ ವಿನಾಯಕ, ಎನ್.ಚಂದ್ರೇಶ್, ದಿವಾಕರ್, ಉಲ್ಲಾಸ ತೆಂಕೋಲು, ಶ್ರೀಧರ, ಪಿಯೂಸ್ ರೋಡ್ರಿಗಸ್ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!