ತಮ್ಮಡಿಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ, ಜೆಜೆಎಂ ಪೈಪ್ ಲೈನ್ ಕಾಮಗಾರಿ ಹೊಂಡಕ್ಕೆ ಬಿದ್ದ ಎಮ್ಮೆ ರಕ್ಷಿಸಿದ ಗ್ರಾಮಸ್ಥರು

0 406

ರಿಪ್ಪನ್‌ಪೇಟೆ: ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಗುಡ್ಡದತೋಟ ಮತ್ತು ಹೊಟ್ಯಾಳಪುರ ಮಜರೆ ಗ್ರಾಮಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಶುದ್ದ ಕುಡಿಯುವ ನೀರಿನ ಸರಬರಾಜು ಯೋಜನೆಗಾಗಿ ಕಳೆದ ಒಂದು ವಾರದ ಹಿಂದೆ ತೆಗೆಯಲಾದ ಪೈಪ್ ಲೈನ್ ಗುಂಡಿಗೆ ಎಮ್ಮೆಯೊಂದು ಬಿದ್ದಿದ್ದು ಅದನ್ನು ರಕ್ಷಿಸುವಲ್ಲಿ ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ ಈ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ಮತ್ತು ಇಂಜಿನಿಯರ್ ಗಮನಕ್ಕೆ ತರಲಾದರೂ ಕೂಡಾ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಗುಡ್ಡದತೋಟ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲಜೀವನ್ ಯೋಜನೆಯಡಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಭರಾಟೆಯಲ್ಲಿ ಕಾಮಗಾರಿ ಹಂತದಲ್ಲಿಯೇ ಈ ಹಿಂದೆ ಇದ್ದಂತಹ ನಲ್ಲಿ ನೀರಿನ ಪೈಪ್‌ಗಳನ್ನು ಕಿತ್ತು ಡ್ಯಾಮೇಜ್ ಮಾಡಿರುವುದರಿಂದಾಗಿ ಗುಡ್ಡದ ತೋಟ ಮತ್ತು ಹೊಟ್ಯಾಳಪುರ ಮಜರೆ ಗ್ರಾಮಗಳಿಗೆ ಕಳೆದ ಒಂದು ವಾರದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ಈ ಬಗ್ಗೆ ಸಂಬಂಧ ಅರಸಾಳು ಗ್ರಾಮ ಅಭಿವೃದ್ಧಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾದರೂ ಕೂಡಾ ಇತ್ತ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಗುಡ್ಡದತೋಟ ನಾಗರಾಜ್ ದೂರಿದ್ದಾರೆ.

Leave A Reply

Your email address will not be published.

error: Content is protected !!