ಪಿಎಸ್ಐ ಕಾನೂನು ಸುವ್ಯವಸ್ಥೆ ಗಾಳಿಗೆ ತೂರಿ ಪಕ್ಷಭೇದ ಮಾಡುತ್ತಿದ್ದಾರೆ ; ಗಂಭೀರ ಆರೋಪ

0 54

ಶಿಕಾರಿಪುರ : ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಪ್ರಶಾಂತ್ ರವರು ಪಕ್ಷಭೇಧ ಮಾಡುತ್ತ, ಪಟ್ಟಣದಲ್ಲಿ ಕಾನೂನ ಸುವ್ಯವಸ್ಥೆಯನ್ನು ಗಾಳಿಗೆ ತೂರಿದ್ದಲ್ಲದೇ, ಸಾರ್ವಜನಿಕರಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಗಂಭೀರವಾಗಿ ಆರೋಪಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಶನಿವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಓಸಿ ಮಟ್ಕಾ ಜೂಜು ದಂದೆಗಳಂತಹಾ ಅನೇಕ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ, ಅದರ ಬಗ್ಗೆ ಏನೂ ಮಾತನಾಡದೆ, ತಾಲ್ಲೂಕಿನಲ್ಲಿ ಗ್ರಾಮೀಣ ಪ್ರದೇಶಗಳಿಂದ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನಗಳಲ್ಲಿ ಆಗಮಿಸುವ ಬಡ ರೈತರ, ಕೂಲಿ ಕಾರ್ಮಿಕರ, ಜನಸಾಮಾನ್ಯರ ಮೇಲೆ ಅನಾವಶ್ಯಕವಾದ ಕೇಸುಗಳನ್ನು ಹಾಕುವ ನೆಪದಲ್ಲಿ ಸಾರ್ವಜನಿಕರಿಂದ ಹಣವಸೂಲಿ ಮಾಡುತ್ತಾ ಹಗಲು ದರೋಡೆಗೆ ಇಳಿದಿದ್ದಾರೆ. ಕೇಸು ಹಾಕುವ ರಶೀದಿ ಪುಸ್ತಕವು ಸರ್ಕಾರದ ಅದಿನಿಯಮದಡಿಯಲ್ಲಿರದೇ, ನೆಪಮಾತ್ರಕ್ಕೆ ರಶೀದಿಯನ್ನು ಹರಿಯುವಂಥ ವ್ಯವಸ್ಥೆ ಇಲ್ಲಿ ಎದ್ದು ಕಾಣುತ್ತಿದೆ. ಇದರಿಂದಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗುತ್ತಿದೆ ಈ ರೀತಿ ಮಾಡಲು ಅನ್ಯ ಪಕ್ಷದವರ ಕುಮ್ಮಕ್ಕು ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಹಲವು ವರ್ಷಗಳ ಹಿಂದೆ ಪಟ್ಟಣದಲ್ಲಿ ಏಕಮುಖ ಸಂಚಾಲಕರಾದ ವ್ಯವಸ್ಥೆಗಳಿದ್ದವು ಆಗ ವಾಹನಗಳು ಸುಗಮವಾಗಿ ಸಂಚಾರ ಮಾಡುತ್ತಿದ್ದವು, ಈಗ ವಾಹನಗಳು ಎಲ್ಲೆಂದರಲ್ಲಿ, ಹೇಗೆಬೇಕೊ ಹಾಗೆ ಸಂಚರಿಸುತ್ತಿವೆ. ಅಲ್ಲದೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ಅನೇಕ ರಸ್ತೆಗಳಲ್ಲಿ ವಾಹನಗಳಲ್ಲಿ ಜನ ದಟ್ಟಣೆ ಹೆಚ್ಚಾಗುವುದಲ್ಲದೇ, ಗ್ರಾಮೀಣ ಪ್ರದೇಶದಿಂದ ಆಗಮಿಸುವ  ವಯೋವೃದ್ಧರಿಗೆ, ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ ಯಾವುದೇ ರೀತಿಯ ವಾಹನಗಳಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ಸುಗಮವಾಗಿ ಸಂಚರಿಸಲಾಗುತ್ತಿಲ್ಲ ಎಂದರು. 

ಸಾರ್ವಜನಿಕರು ಹಲವು ಸಮಸ್ಯಗಳನ್ನು ಅಥವಾ  ಕುಂದು ಕೊರತೆಗಳನ್ನು ಹೊತ್ತು ದೂರುಕೊಡಲೆಂದು ಠಾಣೆಗೆ ಆಗಮಿಸಿದರೆ ಅವರ ಮೇಲೆ ಅನಾವಶ್ಯಕವಾಗಿ ಬೈಯುವ, ಹೊಡೆಯುವ  ದೌರ್ಜನ್ಯ ನಡಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಮೊಬೈಲ್ ಫೋನುಗಳನ್ನು ಕಳೆದುಕೊಂಡು ಠಾಣೆಗೆ ಆಗಮಿಸಿ ದೂರು ನೀಡಿದರೆ ಅವರಿಗೆ ಹರಿಕೆ ಉತ್ತರಗಳನ್ನು ನೀಡಿ ಕಳಿಸುತ್ತಾರಲ್ಲದೇ, ಅನೇಕ ಮೊಬೈಲ್ ಫೋನುಗಳ ಕಳ್ಳರಿಗೆ  ಪಿಎಸ್ಐ ರವರ ಕುಮ್ಮಕ್ಕು  ಇರುವುದು ತಿಳಿದುಬಂದಿದೆ. ಪಟ್ಟಣದ ಪೋಲೀಸ್ ಠಾಣೆಯಲ್ಲಿ ಬ್ರಷ್ಟಾಚಾರ ಹೆಚ್ಚಾಗಿದ್ದು, ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಪಿಎಸ್ಐ ಮಾಡುತ್ತಿದ್ದಾರೆ ಎಂದರಲ್ಲದೇ, ಇದನ್ನು ರಾಜ್ಯದ ಗೃಹ ಸಚಿವರ ಗಮನಕ್ಕೆ ತರಲಾಗುವುದು ಎಂದ ಅವರು, ಬಿಜೆಪಿ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಸಚಿವ ಆರಗ ಜ್ಞಾನೇದ್ರರವರು ನಮ್ಮ ಪಕ್ಷದ ಹಿರಿಯ‌ನಾಯಕರು ಹಾಗೂ ಎಐಸಿಸಿಯ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದನ್ನು ತಾಲ್ಲೂಕು ಕಾಂಗ್ರೆಸ್ ಪಕ್ಷ ಖಂಡಿಸುವುದಲ್ಲದೇ, ಮುಂದಿನ ದಿನಗಳಲ್ಲಿ ಅವರ ಹೇಳಿಕೆಯ ವಿರುದ್ಧ ಹೋರಾಟ ನಡೆಸಲಾಗುವುದು ಎಂದು  ಹೇಳಿದರು.  

ಗೋಷ್ಟಿಯಲ್ಲಿ ಸಾ ನಾ ಮಂಜಪ್ಪ, ರಾಜು ಉಡುಗುಣಿ, ಸುಹಾಸ್ ಇದ್ದರು.

Leave A Reply

Your email address will not be published.

error: Content is protected !!