ರಿಪ್ಪನ್‌ಪೇಟೆ ; ಶ್ರೀ ರಾಮಮಂದಿರಕ್ಕೆ ಪರ್ತಗಾಳಿ ಶ್ರೀಗಳ ಭೇಟಿ

0 496

ರಿಪ್ಪನ್‌ಪೇಟೆ: ಪಟ್ಟಣದ ಗೌಡಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಶ್ರೀ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠಧೀಶರಾದ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮಿಗಳ ಪುರಪ್ರವೇಶ ವಿನಾಯಕ ವೃತ್ತದಲ್ಲಿ ಸಮಾಜದವರೆಲ್ಲ ಸೇರಿ ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಮೀಜಿಯವರನ್ನು ಭರಮಾಡಿಕೊಂಡು ಜಿ.ಎಸ್.ಬಿ ಶ್ರೀರಾಮಮಂದಿರಕ್ಕೆ ಶೋಭಯಾತ್ರೆಯ ಮೂಲಕ ಸಾಗಿದರು.

ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಅಧ್ಯಕ್ಷ ಗಣೇಶ ಕಾಮತರು ಶ್ರೀಪಾದಂಗಳ್ ಅವರಿಗೆ ಪಾದಪೂಜೆಯಲ್ಲಿ ಸಲ್ಲಿಸಿ ಸಮಾಜದ ಮಂದಿರಕ್ಕೆ ಸ್ವಾಗತಿಸಿದರು. ಆ ನಂತರ ಸಮಾಜದ ಶ್ರೀರಾಮದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಮಂದಿರ ಪೂರ್ಣಗೊಂಡ ಕಾಮಗಾರಿಯನ್ನು ವಿಕ್ಷೀಸಿದರು.

ಸಮಾಜದ ಸಮಿತಿಯ ಜೆ.ರಾಧಾಕೃಷ್ಣ ರಾವ್ ಅವರು ಎಲ್ಲರನ್ನು ಸ್ವಾಗತಿಸಿ 1962 ರಲ್ಲಿ ನಮ್ಮ ಸಮಾಜದ ಹಿರಿಯರು ಸಣ್ಣ ಮಂದಿರವನ್ನು ನಿರ್ಮಾಣ ಮಾಡಿದ್ದರು ಆ ನಂತರ ಹಂತ ಹಂತವಾಗಿ ನಮ್ಮ ಕಾಲಕ್ಕೆ ತಕ್ಕಂತೆ ಶಕ್ತ್ಯಾನುಸಾರ ಸಮಾಜದ ಮಂದಿರ ಪುನರ್ ನಿರ್ಮಾಣ ಆಗುತ್ತಿದೆ 2002 ರಲ್ಲಿ ನಮ್ಮ ಸಮಾಜ ಮಂದಿರ ಪುನರ್ ನಿರ್ಮಾಣದ ಕಾಮಗಾರಿಯ ಸಮಯದಲ್ಲಿ ಹಿರಿಯ ಶ್ರೀಗಳಾದ ವಿದ್ಯಾಧೀರಾಜ ಶ್ರೀಪಾದರು ಭೇಟಿಯನ್ನು ನೀಡಿ ಸಮಾಜದ ಮಂದಿರ ನಿರ್ಮಾಣದ ಕಾರ್ಯಕ್ಕೆ ಸಹಕರಿಸಿ ಸಮಾಜ ಬಾಂಧವರಿಗೆಲ್ಲ ಆಶೀರ್ವದಿಸಿದ್ದರು ಎಂಬುದನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಈಗ ಶ್ರೀಪಾದಂಗಳ್ ಅವರ ಪಾದಸ್ಪರ್ಶ ನಮ್ಮ ಸಮಾಜದ ಮಂದಿರಕ್ಕೆ ಆಗಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ಪ್ರಾಸ್ತಾವಿಕ ನುಡಿ ನುಡಿದರು. ನಂತರ ಸಮಾಜದ ಹಿರಿಯರಾದ ಕವಿಗಳಾದ ಮಂಜುನಾಥ ಕಾಮತ್ ಅವರು ಶ್ರೀಗಳನ್ನುದೇಶಿಸಿ ಕವಿತೆ ವಾಚಿಸಿದರು.

ಶ್ರೀ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠಾಧೀಪತಿಗಳಾದ ಶ್ರೀ ವಿದ್ಯಾಧೀಶ ಶ್ರೀಪಾದ ವಡೇರ್ ಸ್ವಾಮಿಗಳು
ಸಮಾಜ ಬಾಂಧವರಿಗೆ ಆಶಿರ್ವಚನದಲ್ಲಿ, ನಾವು ಬ್ರಾಹ್ಮಣರು ದೇವರ ಸೇವಕರು ನಾವು ಪ್ರತಿನಿತ್ಯ ಸಂಧ್ಯಾವಂದನೆ, ಜಪ, ಶ್ರೀದೇವರ ನಿತ್ಯ ಪೂಜೆ, ಭಜನೆ ಇವುಗಳನ್ನು ತಪ್ಪದೇ ಮಾಡುವುದು ನಮ್ಮೆಲ್ಲರ ಕರ್ತವ್ಯ
ಮಾಧ್ವ ಬ್ರಾಹ್ಮಣರಾಗಿ ಶ್ರೀಹರಿನಾಮ ಸ್ಮರಣೆ ಇದು ನಮ್ಮ ಹಕ್ಕು ಪೋಷಕರು ಇದನ್ನು ನಮ್ಮ ಮಕ್ಕಳಿಗೆ ಹೇಳಿಕೊಡಬೇಕು ಸಂಸ್ಕಾರದ ಮೌಲ್ಯಯುತ ಶಿಕ್ಷಣವನ್ನು ನೀಡಬೇಕು. ನಮ್ಮ ವ್ಯಾಪಾರ ವಹಿವಾಟುಗಳ ಒತ್ತಡದಲ್ಲಿ ಈಗೀನ ಆಧುನಿಕ ಜೀವನದಲ್ಲಿ ಸಂಸ್ಕಾರಗಳನ್ನು ನಾವು ಮರೆಯಬಾರದು ನಿಸ್ವಾರ್ಥ ಮನೋಭಾವದಿಂದ ಧಾನ, ಧರ್ಮಗಳನ್ನು ಮಾಡಬೇಕು. ದೇವರು ನೀವು ಎಷ್ಟು ನೀಡಿದ್ದಿರಿ ಏನನ್ನು ಕೊಟ್ಟಿದ್ದೀರಿ ಎಂಬುದು ನೋಡುವುದಿಲ್ಲ ಬದಲಾಗಿ ಅರ್ಪಿಸುವಾಗ ಯಾವ ಭಾವನೆಯಲ್ಲಿ ಅರ್ಪಿಸಿದ್ದೀರ ಎಂದು ದೇವರು ನೋಡುತ್ತಾನೆ ಹಾಗಾಗೀ ಮಾನವನ ಸೇವೆಯೆ ಮಾಧವನ ಸೇವೆ ಎಂದು ತಿಳಿದು ಕಷ್ಟದಲ್ಲಿದ್ದವರ ಕಣ್ಣೊರೆಸುವ ಕಾರ್ಯವನ್ನು ನಾವೆಲ್ಲ ಮಾಡಬೇಕು ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಸಮಾಜದ ಭಕ್ತವೃಂದದವರಿಗೆ ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಉಮೇಶ್ ಭಟ್, ಹರೀಶ್ ಸರಾಫ್, ಹರೀಶ್ ಪ್ರಭು, ರಾಜೇಶ್ ಪ್ರಭು, ಅನಂತಮೂರ್ತಿ ಜವಳಿ, ಡಿ.ನರಸಿಂಹ ಕಾಮತ್, ರಾಮದಾಸ್ ಭಟ್, ಕಿಶನ್ ಭಟ್, ರಮೇಶ್ ಶೆಣೈ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!