Hosanagara | 6 ಪೌರ ಕಾರ್ಮಿಕರಿಗೆ ಖಾಯಂ ಆತಿ ಆದೇಶ ಪತ್ರ ವಿತರಿಸಿದ ಶಾಸಕ ಬೇಳೂರು ; ಮಕ್ಕಳ ವಿದ್ಯಾಭ್ಯಾಸಕ್ಕೆ ಆಧ್ಯತೆ ನೀಡುವಂತೆ ಕರೆ

0 293

ಹೊಸನಗರ : ನಿಷ್ಕಲ್ಮಶ ಮನಸ್ಸಿನಿಂದ ಪಟ್ಟಣದ ಕಶ್ಮಲಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಬದುಕು ಹಸನಾಗಬೇಕೆಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಅವರಿಂದು ಪಟ್ಟಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪೌರಕಾರ್ಮಿಕರು ಶ್ರಮಜೀವಿಗಳಾದರೂ ಅವರ ಬದುಕು ಗಟ್ಟಿತನ ಕಾಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಶಾಸಕರು, ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ತಮ್ಮ ಮುಂದಿನ ಪೀಳಿಗೆಯ ಬದುಕುವ ರೀತಿಯಲ್ಲಿ ಸಾಗುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು, 6 ಪೌರ ಕಾರ್ಮಿಕರಿಗೆ ಖಾಯಂ ಆತಿ ಆದೇಶ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಿದರು.

ಇದೇ ಸಂದರ್ಭದಲ್ಲಿ ಶಾಸಕರು ಎಲ್ಲ ಪೌರಕಾರ್ಮಿಕರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಪೌರಕಾರ್ಮಿಕರು ಸಹ ಶಾಸಕ ಬೇಳೂರು ಗೋಪಾಲಕೃಷ್ಣರವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಪಟ್ಟಣ ಪಂಚಾಯತ್ ಸದಸ್ಯರಾದ ಉಮೇಶ್ ಹಾಲಗದ್ದೆ ಕೆಕೆ ಅಶ್ವಿನಿ ಕುಮಾರ ಗುರುರಾಜ್ ಕೃಷ್ಣವೇಣಿ ಸಿಂತೀಯ ಸೆರಾವು ಶಾಹಿನಾ ನಾಸಿರ್ ನಾಗಪ್ಪ ಚಂದ್ರಕಲಾ ನಾಗರಾಜ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ತಹಸಿಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಗಾಯತ್ರಿ ನಾಗರಾಜ್ ಪ್ರಾರ್ಥಿಸಿದರು. ಜಿ.ಪಿ.ಸುಮಿತ್ರಾ ಸ್ವಾಗತಿಸಿದರು. ಎಂ.ಬಿ ಪ್ರಶಾಂತ್ ವಂದಿಸಿದರು.

ಸಮಾರಂಭಕ್ಕೆ ಮುನ್ನ ತಹಶೀಲ್ದಾರ್ ರಾಕೇಶ್ ರವರೊಂದಿಗೆ ಪಟ್ಟಣ ಪಂಚಾಯಿತಿ ಕಚೇರಿ ಸಿಬ್ಬಂದಿಗಳು ಪೌರಕಾರ್ಮಿಕರು ಅವರ ಕುಟುಂಬ ವರ್ಗದವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಜಾಥಾ ನಡೆಸಿದರು. ಜಾಥ ವೇಳೆ ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಮೆಸ್ಕಾಂ ವೃತ್ತದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿ ಸಂಘದವರು ಪೌರಕಾರ್ಮಿಕರಿಗೆ ಪುಷ್ಪಮಾಲೆ ಹಾಕಿ ಪುಷ್ಪಸಿಂಚನ ನಡೆಸಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.

Leave A Reply

Your email address will not be published.

error: Content is protected !!