ಇರುವಕ್ಕಿ ಕೃಷಿ ವಿವಿ ವಿದ್ಯಾರ್ಥಿಗಳಿಂದ ಕೈದೋಟ ಸಿದ್ಧಪಡಿಸುವ ವಿಧಾನ ಪ್ರದರ್ಶನ

0 628

ರಿಪ್ಪನ್‌ಪೇಟೆ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ , ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ಆರಂಭಿಸಲಾಗಿದ್ದು, ಗುರುವಾರ ಚಿಕ್ಕಜೇನಿಯಲ್ಲಿ ಸಿಹಿಜೇನು ತಂಡದವರು ಕೃಷಿ ಮಾಹಿತಿ ಕೇಂದ್ರದ ಮುಂದೆ ಕೈದೋಟ ಸಿದ್ಧಪಡಿಸುವ ವಿಧಾನ ಪ್ರದರ್ಶನವನ್ನು ಏರ್ಪಡಿಸಿದ್ದರು.

ಟೊಮೆಟೊ, ಹೀರೆಕಾಯಿ, ಬದನೆಕಾಯಿ, ಮೆಣಸಿನಕಾಯಿ, ಕ್ಯಾರೆಟ್, ಸೋರೆಕಾಯಿ, ಹಾಗಲಕಾಯಿ ಇತ್ಯಾದಿ ಬೀಜಗಳನ್ನು ಬಿತ್ತನೆ ಮಾಡಲಾಯಿತು.
ಇಲ್ಲಿ ಮಾಲೀಕರೂ, ಮಾಲಿಯೂ ನಾವೇ ಆಗಿರುತ್ತೇವೆ, ನಮ್ಮ ಅನುಭವ ಅಭಿರುಚಿಗೆ ತಕ್ಕಂತೆ ಕೈದೋಟವನ್ನು ಮನೆ ಸುತ್ತ ಮುತ್ತ ನಿರ್ಮಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಾಯಿತು ಹಾಗೂ ಅತಿಯಾದ ನೀರು ಮತ್ತು ಕಡಿಮೆ ನೀರು ಸಸ್ಯಗಳಿಗೆ ಒಳ್ಳೆಯದಲ್ಲ. ಮಣ್ಣಿನ ಗುಣ, ಹವಾಮಾನ ಮತ್ತು ಸಸ್ಯಕ್ಕೆ ಬೇಕಾಗಿರುವ ದೈನಂದಿನ ಅಗತ್ಯತೆಗಳನ್ನು ಗಮನಿಸಿ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ವಿವರಣೆ ನೀಡಲಾಯಿತು.
ಇದರ ಜೊತೆಗೆ 2011 ರಲ್ಲಿ ಜಾರಿಗೆ ಬಂದ ಮಹಿಳಾ ಕಿಸಾನ್ ಸಶಕ್ತಿಕರಣ ಪರಿಯೋಜನ ಎಂಬ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಕೊಡುವುದರ ಜೊತೆಗೆ ಗುಂಪು ಚರ್ಚೆ ಮಾಡಲಾಯಿತು.

ಈ ಯೋಜನೆಯು ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ವ್ಯವಸ್ಥಿತ ಹೂಡಿಕೆಗಳನ್ನು ಮಾಡುವ ಮೂಲಕ ಕೃಷಿಯಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಇದು ಗ್ರಾಮೀಣ ಮಹಿಳೆಯರಿಗೆ ಕೃಷಿ ಆಧಾರಿತ ಜೀವನೋಪಾಯವನ್ನು ಸೃಷ್ಟಿಸುವ ಮತ್ತು ಉಳಿಸಿಕೊಳ್ಳುವತ್ತ ಗಮನಹರಿಸುತ್ತದೆ ಎಂದು ತಿಳಿಸಿಕೊಟ್ಟರು.

Leave A Reply

Your email address will not be published.

error: Content is protected !!