ಹೊಸನಗರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆ ; ಮಾಸ್ತಿಕಟ್ಟೆಯಲ್ಲಿ 20 ಸೆಂ.ಮೀ. ಮಳೆ ದಾಖಲು ! ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ನಾಲ್ಕೂವರೆ ಅಡಿ ನೀರು

0 110

ಹೊಸನಗರ : ಮಳೆ(ಲೆ)ನಾಡಿನ ತವರುರಾದ ಹೊಸನಗರ ತಾಲೂಕಿನಾದ್ಯಂತ ಪುಷ್ಯ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಸುರಿಯುತ್ತಿರುವ ಕಾರಣ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಸೋಮವಾರ ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ನಾಲ್ಕೂವರೆ ಅಡಿಗಳಷ್ಟು ಏರಿದ್ದು ತಾಲೂಕಿನ ಮಾಸ್ತಿಕಟ್ಟೆಯಲ್ಲಿ 202 ಮಿ.ಮೀ. ಅತ್ಯಧಿಕ ಮಳೆ ದಾಖಲಾಗಿದೆ.

ಉಳಿದಂತೆ ಮಾಣಿ ಮತ್ತು ಹುಲಿಕಲ್ಲಿನಲ್ಲಿ 198, ಸಾವೇಹಕ್ಲು 193, ಚಕ್ರಾನಗರ 192 ಯಡೂರು 188, ಹುಂಚ 180, ಹೊಸನಗರ 130, ಕಾರ್ಗಲ್ (ಸಾಗರ) 120, ಅರಸಾಳು 93 ಮತ್ತು ರಿಪ್ಪನ್‌ಪೇಟೆಯಲ್ಲಿ 48 ಮಿ.ಮೀ. ಮಳೆ ದಾಖಲಾಗಿದೆ.

ಗರಿಷ್ಠ 1819 ಅಡಿ ಹೊಂದಿರುವ ಲಿಂಗನಮಕ್ಕಿ ಜಲಾಶಯ ಇಂದು ಬೆಳಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ 1775.15 ಅಡಿ ನೀರಿನ ಮಟ್ಟ ತಲುಪಿದೆ. ಜಲಾಶಯಕ್ಕೆ 73505 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 1795.95 ಅಡಿ ದಾಖಲಾಗಿತ್ತು.

Leave A Reply

Your email address will not be published.

error: Content is protected !!