Ripponpet | ಗಿಳಿಶಾಸ್ತ್ರ ಹೇಳುತ್ತಿದ್ದ ಇಬ್ಬರ ಬಂಧನ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ

0 780

ರಿಪ್ಪನ್‌ಪೇಟೆ : ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ವಿನಾಯಕ್ ರವರ ನೇತೃತ್ವದಲ್ಲಿ ದಾಳಿ ನಡೆಸಿ ಜ್ಯೋತಿಷಿಗಳು ಬಳಸುತ್ತಿದ್ದ ಗುಲಾಬಿ ಉಂಗುರದ ಗಿಳಿ (Rose-ringed parakeet) ಹಿಡಿದು ರಕ್ಷಿಸಿದ್ದು, ಈ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ದಾವಣಗೆರೆ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿರುವ‌ ಮಂಜುನಾಥ್ ಮತ್ತು ಯಲ್ಲಪ್ಪ ಬಂಧಿತ ಆರೋಪಿಗಳು.

ಸೋಮವಾರ ಮಧ್ಯಾಹ್ನ ಅಳಿವಂಚಿನಲ್ಲಿರುವ ಗುಲಾಬಿ ಉಂಗುರದ ಗಿಳಿ (Rose-ringed parakeet) ನ್ನು ಬಳಸಿ ರಿಪ್ಪನ್‌ಪೇಟೆಯ ಕೆರೆಹಳ್ಳಿ ಕ್ರಾಸ್ ಬಳಿಯಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಗುಲಾಬಿ ಉಂಗುರದ ಗಿಳಿಗಳು ಅಳಿವಿನಂಚಿನಲ್ಲಿರುವ ಪಕ್ಷಿಯಾಗಿದ್ದು ಸಾಮಾನ್ಯವಾಗಿ ಕಾಡುಗಳಿಂದ ಹಿಡಿಯಲ್ಪಡುತ್ತವೆ. ಅದರ ನಂತರ ಅವುಗಳ ರೆಕ್ಕೆಗಳನ್ನು ಕತ್ತರಿಸಲಾಗುತ್ತದೆ ಮತ್ತು ಕೊಕ್ಕುಗಳನ್ನು ಮೊಂಡು ಮಾಡಲಾಗುತ್ತದೆ. ಗಿಳಿಗಳಿಗೆ ಥಳಿಸಿ ಮತ್ತು ಪಂಜರದಲ್ಲಿ ಉಳಿಯಲು ತರಬೇತಿ ನೀಡಲಾಗುತ್ತದೆ. ಸಿಗ್ನಲ್ ನೀಡಿದಾಗ ಹೊರಬರಲು, ಜ್ಯೋತಿಷ್ಯ ಕಾರ್ಡ್ ಅನ್ನು ಆರಿಸಿ ಮತ್ತು ಕಾರ್ಡ್ ಅನ್ನು ಮಾಲೀಕರಿಗೆ ನೀಡಿದ ನಂತರ ಮತ್ತೆ ಪಂಜರಕ್ಕೆ ಹೋಗುತ್ತದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಳಿವಿನಂಚಿನಲ್ಲಿರುವ ಗುಲಾಬಿ ಉಂಗುರದ ಗಿಳಿಗಳನ್ನು ಹಿಂಸಿಸುವುದು ಇತ್ಯಾದಿಗಳು ಕಾನೂನಿನ ಪ್ರಕಾರ ಅಪರಾಧಗಳಾಗಿವೆ.

ಸಾವಿರಾರು ಜನರಿಗೆ ಜ್ಯೋತಿಷ್ಯ ಹೇಳುವ ಗಿಳಿ ಶಾಸ್ತ್ರ ಜ್ಯೋತಿಷ್ಯರಿಗೆ ಕೊನೆಗೂ ಗೊತ್ತಾಗಲಿಲ್ಲ ಜೈಲಿಗೆ ಹೋಗಬೇಕೆಂದು. ಹೇಗಿದೆ ಜ್ಯೋತಿಷ್ಯರ ವಿಧಿ ವಿಪರ್ಯಾಸ.

ಈ ಕಾರ್ಯಾಚರಣೆಯಲ್ಲಿ ಸಾಗರ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರಮೋದಿನಿ,  ಗಣೇಶ್, ಗಿರೀಶ್, ವಿಶ್ವನಾಥ, ಕೃಷ್ಣ, ದಿನೇಶ, ಮಹೇಶ್ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!