ಇರುವಕ್ಕಿ ಕೃಷಿ ಕಾಲೇಜಿನ ವಿದ್ಯಾರ್ಥಿಗಳಿಂದ ವಿಶೇಷ ರೀತಿಯಲ್ಲಿ ಮಹಿಳಾ ದಿನಾಚರಣೆ | ಕರ್ಮಣಿ ಹಿರಿಯ ಅಜ್ಜಿಗೆ ಸನ್ಮಾನ

0 441

ರಿಪ್ಪನ್‌ಪೇಟೆ : ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ:ಇರುವಕ್ಕಿಯ ಅಂತಿಮ ವರ್ಷದ ಬಿ. ಎಸ್ಸಿ. ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರವನ್ನು ಚಿಕ್ಕಜೇನಿಯಲ್ಲಿ ಆರಂಭಿಸಲಾಗಿದ್ದು ಶುಕ್ರವಾರ ಸಿಹಿಜೇನು ತಂಡದವರು ಕರ್ಮಣಿ ಜಗಜ್ಜನನಿಯರಿಗೆ ಶುಭಾಶಯ, ಕರ್ಮವೀರ ರೈತ ನಮನ ಕಾರ್ಯಕ್ರಮ ಎಂಬ ಶೀರ್ಷಿಕೆಯಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದಲ್ಲಿ ಸಹಕರಿಸಿದ ರೈತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು‌.

ಕಾರ್ಯಕ್ರಮವನ್ನು ಅಡಿಕೆ ಹೊಂಬಾಳೆ ಅರಳಿಸುವುದರ ಮೂಲಕ ನೆರೆದಿದ್ದ ಗಣ್ಯರು ಉದ್ಘಾಟಿಸಿದರು. ಮಹಿಳಾ ದಿನಾಚರಣೆಯ ವಿಶೇಷತೆ ಕುರಿತು ಶಾಂತ ರಮೇಶ್ ರವರು ಮಾತನಾಡಿದರು. ಚಿಕ್ಕಜೇನಿ ಗ್ರಾಮದ ಹಿರಿಯ ಮಹಿಳೆ ಶೇಕಮ್ಮರವರನ್ನು ಸನ್ಮಾನಿಸಲಾಯಿತು.

ಹಲವು ವೀರ ಮಹಿಳೆಯರ ವೇಷ ಧರಿಸಿದ ಚಿಣ್ಣರ ತಂಡವೊಂದು ವೇದಿಕೆಗೆ ಮೆರುಗು ನೀಡಿತು. ಆರ್ಥಿಕವಾಗಿ ಹಾಗೂ ಪರಮಾರ್ಥವಾಗಿ ನೆರವು ನೀಡಿದ ಗ್ರಾಮ ಪಂಚಾಯ್ತಿಯವರನ್ನು, ಪ್ರಗತಿಪರ ರೈತರು ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತರಾದ ವಿಜಯೇಂದ್ರ ಭಟ್ಟ್ ರವರ ಧರ್ಮಪತ್ನಿ ಕಾವ್ಯರವರನ್ನು, ಮಾಜಿ ಯೋಧರಾದ ಗಂಗಾಧರ್ ರವರ ಧರ್ಮಪತ್ನಿ ಶೋಭಾ ಗಂಗಾಧರ್ ರವರನ್ನು ಹಾಗೂ ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡಿ ತಂಡಕ್ಕೆ ಹುರುಪು ತುಂಬುತ್ತಿದ್ದ ರಾವೆ ಮುಖ್ಯ ಸಂಯೋಜಕ ಡಾ. ಶಶಿಕಲಾ (ಕೃಷಿ ವಿಸ್ತರಣಾ ವಿಭಾಗ) ರವರಿಗೆ ಗೌರವ ಸಮರ್ಪಿಸಲಾಯಿತು.

ಚಿಕ್ಕಜೇನಿ/ಹೀರೆಜೇನಿಯೊಂದಿಗಿನ ಸಿಹಿಜೇನಿ ತಂಡದ ಬಾಂಧವ್ಯವನ್ನು ಸುಜಾತಾರವರು ಬಿತ್ತರಿಸಿದರು. ಸೋಲಾರ್ ವೀಡ್ ಕಟರ್ ಮಾದರಿಯೊಂದನ್ನು ತಯಾರಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಯುವ ಪ್ರತಿಭೆ ಅಭಿಷೇಕ್ ರವರಿಗೆ ಗೌರವ ಕಾಣಿಕೆಯೊಂದಿಗೆ ಅಭಿನಂದಿಸಲಾಯಿತು.

ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರದಲ್ಲಿ ಕೃಷಿ ಚಟುವಟಿಕೆಗಳಿಗೆ ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸಿದ ರೈತರು ಮತ್ತು ರೈತ ಮಹಿಳೆಯರಿಗೆ ಹಾಗೂ ಮಹಿಳಾ ದಿನಾಚರಣೆಯ ಪ್ರಯುಕ್ತ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಸ್ಮರಣಾರ್ಥವಾಗಿ ನೆನಪಿನ ಕಾಣಿಕೆಗಳನ್ನು, ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾವೆ ಮುಖ್ಯ ಸಂಯೋಜಕರಾದ ಡಾ. ಶಶಿಕಲಾ, ಹಿರಿಯ ತಲೆಯಾದ ಶೇಕಮ್ಮ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಸುಜಾತ ಮತ್ತು ಸದಸ್ಯರಾದ ಅಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!