Rain Reports | ಮಾಣಿ ಜಲಾಶಯ ಪ್ರದೇಶದಲ್ಲಿ 22 ಸೆಂ.ಮಿ. ಅತ್ಯಧಿಕ ಮಳೆ ; ಲಿಂಗನಮಕ್ಕಿ ಡ್ಯಾಂಗೆ ಒಂದೇ ದಿನ ಮೂರೂವರೆ ಅಡಿ ನೀರು ಸಂಗ್ರಹ

0 106

ಹೊಸನಗರ : ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಾದ್ಯಂತ ಬಿರುಸಿನ ಗಾಳಿ ಹಾಗೂ ಮಳೆ ಬೀಳುತ್ತಿದ್ದು ಭಾನುವಾರ ಬೆಳಿಗ್ಗೆ 8:00 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಾಲೂಕಿನ ಮಾಣಿ ಜಲಾಶಯ ಪ್ರದೇಶದಲ್ಲಿ ಅತ್ಯಧಿಕ 22 ಸೆಂ.ಮೀ. ಮಳೆ ದಾಖಲಾಗಿದೆ.

ಉಳಿದಂತೆ ತಾಲೂಕಿನ ಸಾವೇಹಕ್ಲು 200, ಚಕ್ರಾನಗರ 190, ಹುಲಿಕಲ್ 173, ಮಾಸ್ತಿಕಟ್ಟೆ 170, ಸೊನಲೆ 162.5, ಯಡೂರು 157, ತ್ರಿಣಿವೆ 151, ಹೊಸನಗರ ಮತ್ತು ಸುಳಗೋಡು 140, ಕಾರ್ಗಲ್ (ಸಾಗರ) 136.8, ಹಾದಿಗಲ್ಲು (ತೀರ್ಥಹಳ್ಳಿ) 129, ಬಿದನೂರುನಗರ 127, ಮೇಲಿನಬೆಸಿಗೆ 119, ಬಿದರಗೋಡು (ತೀರ್ಥಹಳ್ಳಿ) 113, ನಗರ 110.5 ಮತ್ತು ಮುಂಬಾರು 105.5 ಮಿ.ಮೀ. ಮಳೆ ದಾಖಲಾಗಿದೆ.

ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ಮೂರೂವರೆ ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದ್ದು ಇಂದು ಬೆಳಿಗ್ಗೆ ನೀರಿನ ಮಟ್ಟ 1770.70 ಅಡಿ ದಾಖಲಾಗಿದೆ. ಜಲಾಶಯಕ್ಕೆ 52374 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯ ನೀರಿನ ಮಟ್ಟ 1797.65 ಅಡಿ ದಾಖಲಾಗಿತ್ತು.

ಇಂದು ಸಹ ತಾಲೂಕಿನಾದ್ಯಂತ ಬಿರುಸಿನ ಗಾಳಿ, ಮಳೆ ಬೀಳುತ್ತಿದೆ. ನದಿಗಳು ತುಂಬಿ ಹರಿಯುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

Leave A Reply

Your email address will not be published.

error: Content is protected !!