03 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ ಅಪ್ರಾಪ್ತ ಬಾಲಕನಿಂದ ಅತ್ಯಾಚಾರ !

0
1201

ಶಿಕಾರಿಪುರ: ಮೂರು ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಬಾಲಕ ಅತ್ಯಾಚಾರ ಎಸಗಿರುವ ಬಗ್ಗೆ ವರದಿಯಾಗಿದೆ.

ಇಂದು ಬೆಳಗ್ಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿಕಾರಿಪುರ ತಾಲ್ಲೂಕಿನ ವಾಸಿ 03 ವರ್ಷದ ಅಪ್ರಾಪ್ತ ಬಾಲಕಿಯು ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಾ ಪಕ್ಕದ ಮನೆಗೆ ಹೋಗಿದ್ದಾಗ, ಆ ಮನೆಯ 17 ವರ್ಷ 11 ತಿಂಗಳು ವಯಸ್ಸಿನ ಬಾಲಕನು ಅತ್ಯಾಚಾರ ಮಾಡಿರುತ್ತಾನೆಂದು ನೊಂದ ಬಾಲಕಿಯ ತಾಯಿಯು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0217/2021 ಕಲಂ 376 A, B ಐಪಿಸಿ ಮತ್ತು ಕಲಂ 4, 6 ಫೊಕ್ಸೋ ಕಾಯ್ದೆರೀತ್ಯಾ ಪ್ರಕರಣ ದಾಖಲಾಗಿದೆ.

ಪಿ.ಎಸ್.ಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆರವರು ಪ್ರಕರಣದ ತನಿಖೆ ಕೈಗೊಂಡು ಕೂಡಲೇ ಮೇಲ್ಕಂಡ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆತನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಜಾಹಿರಾತು

LEAVE A REPLY

Please enter your comment!
Please enter your name here