09 ವರ್ಷದ ಹಿಂದೆ ಅತ್ಯಾಚಾರ ವೆಸಗಿದ ಆರೋಪಿಗೀಗ 20 ವರ್ಷ ಜೈಲು ಶಿಕ್ಷೆ !

0
904

ಶಿವಮೊಗ್ಗ: 09 ವರ್ಷದ ಮೇಲೆ ಅತ್ಯಾಚಾರವೆಸಗಿ ಬೆದರಿಸಿದ್ದ ಆರೋಪಿಗೆ ಪೋಕ್ಸೊ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕಳೆದ 2019 ರ ಮೇ 11 ರಂದು ಶಿವಮೊಗ್ಗದ ಟಿಪ್ಪುನಗರ ವಾಸಿಯಾದ ಆರೋಪಿ ಬರ್ಕತ್ @ ಮೊಹಮ್ಮದ್ ಗೌಸ್ ಫೀರ್ ಎಂಬಾತನು ತನ್ನ ಸಂಬಂಧಿ 9 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕವಾಗಿ ಕಿರುಕುಳ ನೀಡಿ, ಅತ್ಯಾಚಾರವೆಸಗಿ ಬೆದರಿಕೆ ಹಾಕಿದ್ದ, ಬಗ್ಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಗುನ್ನೆ ಸಂಖ್ಯೆ 26/2019 ನ್ನು ದಾಖಲಿಸಲಾಗಿತ್ತು.

ಅಂದಿನ ಇನ್ಸ್ ಸ್ಪೆಕ್ಟರ್ ಲತಾ ಬಿ.ಕೆ, ಮಹಿಳಾ ಠಾಣೆ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಕಲಂ. 376(2)(ಎನ್)(ಎಫ್) ಐಪಿಸಿ ಮತ್ತು ಕಲಂ. 5(ಎನ್), 06 ಆಫ್ ಪೋಕ್ಸೋ 2012 ಆಕ್ಟ್ ರೀತ್ಯಾ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸತೀಶ್‍ ರವರು ವಾದ ಮಂಡಿಸಿದ್ದು ಶಿವಮೊಗ್ಗ ಎ.ಡಿ.ಜೆ ಎಫ್.ಟಿ.ಎಸ್.ಸಿ 1 (ಪೋಕ್ಸೋ) ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಾಧೀಶರಾದ ದಯಾನಂದ ರವರು 2021 ಸೆ.14 ರಂದು ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದು, ತಪ್ಪಿದ್ದಲ್ಲಿ 06 ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ಮುಂದುವರೆಸಲು ಮತ್ತು ನೊಂದ ಬಾಲಕಿಗೆ ಪರಿಹಾರವನ್ನಾಗಿ ದಂಡದ ಮೊತ್ತದಲ್ಲಿ 48 ಸಾವಿರ ರೂ.ಗಳನ್ನು ಹಾಗೂ ಉಳಿದ 2000 ರೂ. ಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿ ತೀರ್ಪು ನೀಡಿರುತ್ತಾರೆ.

ಜಾಹಿರಾತು

LEAVE A REPLY

Please enter your comment!
Please enter your name here