12ನೇ ಶತಮಾನದಲ್ಲಿ ಶಿಕ್ಷಣದಲ್ಲಿ ಅವಕಾಶ ವಂಚನೆಯ ಬಗ್ಗೆ ಧ್ವನಿ ಎತ್ತಿದವರು ಮಡಿವಾಳ ಮಾಚಿದೇವ: ಎಂ.ಎನ್ ಸುಧಾಕರ್

0
203

ಹೊಸನಗರ: 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ವಶ್ಯತೆ, ಮೂಡನಂಬಿಕೆಗಳ ಸೃಷ್ಠಿ, ಶಿಕ್ಷಣದಲ್ಲಿ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾದ ಸಂದರ್ಭದಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಸಾಮಾಜಿಕ ಕ್ರಾಂತಿ ಎಬ್ಬಿಸಿದವರು ಮಡಿವಾಳ ಮಾಚಿದೇವ ಎಂದು ಮಾಡಿವಾಳರ ತಾಲ್ಲೂಕು ಸಂಘದ ಅಧ್ಯಕ್ಷರಾದ ಎಂ.ಎನ್ ಸುಧಾಕರ್‌ರವರು ಹೇಳಿದರು.

ಹೊಸನಗರ ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಕಛೇರಿಯ ಆವರಣದಲ್ಲಿ ಮಾಡಿವಾಳ ಮಾಚಿದೇವ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದರು.

ಮಡಿವಾಳ ಮಾಚಿದೇವರು ಸಮಾಜ ಸುಧಾರಕರಾಗಿದ್ದು 12ನೇ ಶತಮಾನದಲ್ಲಿಯೇ ಅನೇಕ ನಿಷ್ಟುರವಾದ ಕಠೋರವಾದ ನಿಲುವುಗಳನ್ನು ಮಂಡಿಸಿದವರು ಸಮಾಜದ ಸುಧಾರಣೆ ಹಾಗೂ ಜಾತಿಯತೇಯ ವಿರುದ್ಧ ಹೋರಾಟ ನಡೆಸಿದವರು ಇಂಥವರು ಹಿಂದೆ ಇದ್ದ ಕಾರಣ ಇಂದು ನಾವು ನಿವೇಲ್ಲರೂ ಒಟ್ಟಿಗೆ ಬಾಳಲು ಸಾಧ್ಯವಾಗಿದೆ ಎಂದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಗ್ರೇಡ್2 ತಹಶೀಲ್ದಾರ್ ರಾಕೇಶ್‌ರವರು ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಇದ್ದ ಸಾಮಾಜಿಕ ಪೀಡಿಗು ಇಂದಿಗೂ ಅಲ್ಲಿ ಇಲ್ಲಿ ಕಾಣ ಸಿಗುತ್ತಿದೆ ಅದನ್ನು ಸಂಪೂರ್ಣ ಹೋಗಲಾಡಿಸಬೇಕಾದರೆ ಮಡಿವಾಳ ಮಾಚಿದೇವರೇ ಪುನ ಹುಟ್ಟಿಬರಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಶಿರಾಸ್ಥೆದಾರ್ ಶ್ರೀಕಾಂತ್ ಹೆಗ್ಡೆ, ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್, ಮಂಜುಳಾ, ಚಾಂದಿನಿ, ನಾಡಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ ಕರ್ನಾಟಕ ಬ್ಯಾಂಕ್ ನಿವೃತ್ತ ಗುಮಾಸ್ಥರಾದ ಬಿ.ಎಂ ಶ್ರೀಧರ, ಎಂ.ಎನ್ ಕೃಷ್ಣಮೂರ್ತಿ, ನಾಗರಾಜ್ ಕಿಣಿ, ನಾಗಪ್ಪ, ಶಿವಪ್ಪ, ಬಚ್ಚಪ್ಪ, ಧರ್ಮರಾಜ್, ಕಲ್ಲೂರು ವೀರಪ್ಪ, ಎಂಗುಡ್ಡೆಕೊಪ್ಪ ರವಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ರಿಪ್ಪನ್‌ಪೇಟೆ ವರದಿ :

ರಿಪ್ಪನ್‌ಪೇಟೆ: ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮಡಿವಾಳ ಸಂಘ ಇವರು ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಆಚರಿಸಿದರು.

ಗ್ರಾಮದ ಸಮುದಾಯದ ಗ್ರಾಮ ಪಂಚಾಯತ್ ಸದಸ್ಯರಾದ ದೇವರಾಜ್ ಜಿ.ಟಿ ಹಾಗೂ ಗ್ಪಾಪಂ ಸದಸ್ಯರಾದ ಸದಸ್ಯರಾದ ಶಾಂತಕುಮಾರಿ, ಮಡಿವಾಳ ಸಮಾಜದ ಮುಖಂಡರಾದ ಮಂಜಪ್ಪ ಬಿ.ಹೆಚ್, ಸತೀಶ್, ಹರೀಶ್ ಬಿ.ಎನ್, ಶಮಂತ್, ವೆಂಕಟೇಶ್, ನಾಗರಾಜ್, ಶೇಖರಪ್ಪ ಇನ್ನು ಹಲವಾರು ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡು ಬಸವಾಪುರ ಗ್ರಾಮದ ಮಡಿವಾಳ ಸಮಾಜದ ಎಲ್ಲ ಮನೆ-ಮನೆಗೂ ಮಾಚಿದೇವರವರ ಫೋಟೋ ವಿತರಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here