12ನೇ ಶತಮಾನದ ಅನುಭವ ಮಂಟಪದ ಮಹತ್ವವು ಈ ನಾಡಿಗೆ ಪ್ರಜಾಪ್ರಭುತ್ವದ ಬುನಾದಿಯಾಗಿದೆ ; ಪಿಎಸ್ಐ ರಾಜೇಂದ್ರನಾಯ್ಕ್

0
685

ಹೊಸನಗರ: 12ನೇ ಶತಮಾನದಲ್ಲಿ ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪದ ಮಹತ್ವವು ಈ ನಾಡಿಗೆ ಪ್ರಜಾಪ್ರಭುತ್ವದ ಬುನಾದಿಯಾಗಿದೆ ಎಂದು ಹೊಸನಗರದ ಸಬ್ಇನ್ಸ್‌ಪೆಕ್ಟರ್ ರಾಜೇಂದ್ರನಾಯ್ಕ್ ರವರು ಹೇಳಿದರು.

ಹೊಸನಗರ ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಪುನೀತ್ ರಾಜ್‍ಕುಮಾರ್ ಬಳಗಾ ಸಲೆಕ್ಷನ್ ವೆಜಿಟೆಬಲ್ ಮತ್ತು ಹೊಸನಗರದ ದಿನಸಿ ವ್ಯಾಪಾರಿ ಉಮಾ ಜಿ.ಟಿ ಈಶ್ವರಗೌಡರವರ ಸಹಯೋಗದಲ್ಲಿ ಬಸವೇಶ್ವರ ಜಯಂತಿ ಹಾಗೂ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಜಿ.ಟಿ ಈಶ್ವರಗೌಡರವರ ಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಸಮಾರಂಭಕ್ಕೆ ಆಗಮಿಸಿ ಮಾತನಾಡಿದರು.

ಬಸವಣ್ಣನವರು 12ನೇ ಶತಮಾನದಲ್ಲಿ ಬಸವಣ್ಣನವರು ದೇವತ ಮನುಷ್ಯರಾಗಿದ್ದರು ಇವರ ಈ ಹೆಸರಿನಲ್ಲೆ ಏನೋ ಚೈತನ್ಯವಿದೆ ನಮ್ಮ ವಿಶ್ವವೇ ಕಂಡ ಮಹಾನ್ ಸಮಾಜ ಸುಧಾರಕರಿವರು. ಬಸವಣ್ಣನವರ ತತ್ವ ಆದರ್ಶಗಳು ಸದಾ ಕಾಲಕ್ಕೂ ಪ್ರಸ್ತುತ ವಚನಗಳ ಮೂಲಕ ಬದುಕಿಗೆ ದಾರಿ ತೋರಿದ ವಿಶ್ವಗುರು ಬಸವಣ್ಣನವರು ಎಂದರು.

ಬಸವೇಶ್ವರರ ಬಗ್ಗೆ ಮಾತನಾಡಿದ ಚಂದ್ರಪ್ಪನವರು ಅಸ್ಪೃಶ್ಯತೆ ಸಾಮಾಜಿಕ ಸಮಾನತೆ, ಮಹಿಳೆಯರಿಗೆ ಸ್ಥಾನಮಾನ ನೀಡುವಲ್ಲಿ ಬಸವಣ್ಣನವರು ಕೊಟ್ಟ ಕೊಡುಗೆಗಳು ಎಂದೆಂದಿಗೂ ಪ್ರಸ್ತುತ ಎಂದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ದುಮ್ಮ ರೇವಣ್ಣಪ್ಪ ಗೌಡರವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಕುಮಾರಿ, ಕೆ.ಎಂ.ಚನ್ನಬಸಪ್ಪ, ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಗಂಗಾಧರಯ್ಯ, ದೀಪಕ್ ಸ್ವರೂಪ್, ಸ್ಫೂರ್ತಿ, ಯಾಸೀರ್, ಕೆ.ಜಿ.ಮಂಜಪ್ಪ. ಜಿ.ಟಿ ಈಶ್ವರಗೌಡ, ವಸವ ಈಶ್ವರಗೌಡ ಮಲ್ಲಿಕಾರ್ಜುನ ಸ್ವಾಮಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here