20.6 C
Shimoga
Friday, December 9, 2022

165 ಎಸೆತಗಳಲ್ಲಿ 407 ರನ್ ಸಿಡಿಸಿ ಇತಿಹಾಸ ಸೃಷ್ಟಿಸಿದ ಸಾಗರದ ಪೋರ !

ಸಾಗರ: ಶಿವಮೊಗ್ಗದಲ್ಲಿ ಶನಿವಾರ ನಡೆದ ಕೆ‌.ಎಸ್ ಸಿ.ಎ ಜಿಲ್ಲಾ ಅಂತರ್ ಕ್ಲಬ್ 16 ವರ್ಷದೊಳಗಿನ ಪಂದ್ಯದಲ್ಲಿ, ಕ್ರಿಕೆಟ್ ಕ್ಲಬ್ ಆಫ್ ಸಾಗರ ತಂಡದ ಬ್ಯಾಟ್ಸ್‌ಮನ್ 400 ರನ್ ಸಿಡಿಸಿ ಇತಿಹಾಸ ಸೃಷ್ಟಿಸಿದ್ದಾನೆ.

ಎನ್‌ಟಿಸಿಸಿ ಭದ್ರಾವತಿ ತಂಡದ ವಿರುದ್ಧದ ಪಂದ್ಯದಲ್ಲಿ ತನ್ಮಯ್, ಕೇವಲ 165 ಎಸೆತಗಳಲ್ಲಿ 48 ಬೌಂಡರಿ, 24 ಸಿಕ್ಸರ್ ಸಹಿತ 407 ರನ್ ಸಿಡಿಸಿದ್ದಾನೆ.

ಶಿವಮೊಗ್ಗ ಫೆಸಿಟ್ ಕಾಲೇಜಿನ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭದ್ರಾವತಿಯ ಎನ್‌ಟಿಸಿಸಿ ತಂಡದ ವಿರುದ್ಧ ಅವರು ಈ ಸಾಧನೆ ಮಾಡಿದ್ದಾರೆ.

ತನ್ಮಯ್‌ ಅಬ್ಬರ‌ದ ಬ್ಯಾಟಿಂಗ್‌ನಲ್ಲಿ 24 ಸಿಕ್ಸರ್ ಹಾಗೂ 48 ಬೌಂಡರಿಗಳು ಸೇರಿವೆ.

ಆರಂಭಿಕ ಬ್ಯಾಟರ್ ಎ.ಅಂಶು ಹಾಗೂ ತನ್ಮಯ್‌ ಜೋಡಿಯು ಮೊದಲ ವಿಕೆಟ್‌ಗೆ 350 ರನ್‌ ಕಲೆ ಹಾಕುವ ಮೂಲಕ ಭದ್ರಾವತಿ ತಂಡದ ಬೌಲರ್‌ಗಳನ್ನು ದಂಡಿಸಿದರು. ಅಂಶು 127 (90 ಎಸೆತ) ರನ್ ಗಳಿಸಿ ಔಟಾದರು. ಸಾಗರ ತಂಡ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 583 ರನ್‌ಗಳ ಬೃಹತ್‌ ಮೊತ್ತೆ ಕಲೆ ಹಾಕಿತು. ತನ್ಮಯ್ 50ನೇ ಓವರ್‌ನ ಮೂರನೇ ಎಸೆತದಲ್ಲಿ ಕವರ್ಸ್‌ ಫೀಲ್ಡರ್‌ಗೆ ಕ್ಯಾಚಿತ್ತು ಔಟಾದರು.

ಇದಕ್ಕೆ ಉತ್ತರವಾಗಿ ಭದ್ರಾವತಿ ತಂಡ ಕೇವಲ 73 ರನ್‌ ಗಳಿಸಿ ಆಲ್ ಔಟ್ ಆಯಿತು. ಸಾಗರ ತಂಡದ ಪರವಾಗಿ ಅಂಶು 5 ವಿಕೆಟ್ ಪಡೆದರೆ ಅಜಿತ್ 4 ವಿಕೆಟ್ ಗಳಿಸಿದರು.

ರಾಜ್ಯ ತಂಡವನ್ನು ಪ್ರತಿನಿಧಿಸಿರುವ ತನ್ಮಯ್, ಸಾಗರದ ನಾಗೇಂದ್ರ ಪಂಡಿತ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ ಕ್ರಿಕೆಟ್‌ ತರಬೇತಿ ಪಡೆಯುತ್ತಿದ್ದಾರೆ. ತನ್ಮಯ್ ಅವರ ಈ ಪ್ರದರ್ಶನವನ್ನು ಹಾಡಿ ಹೊಗಳಿದ ಕೋಚ್‌ ನಾಗೇಂದ್ರ ಪಂಡಿತ್ ಅವರು ಇದು ಕ್ರಿಕೆಟ್ ಇತಿಹಾಸದಲ್ಲಿ ಸರ್ವಕಾಲಿಕ ದಾಖಲೆ ಎಂದು ಬಣ್ಣಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!