17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ | ರೋಪ್ ವೇ ಕೈಬಿಡಲು ಒತ್ತಾಯಿಸಿ ನಿರ್ಣಯ

0
199

ಅಜ್ಜಂಪುರ: ಚಿಕ್ಕಮಗಳೂರು ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳವಾರ ಅಜ್ಜಂಪುರದಲ್ಲಿ ಸಮಾರೋಪಗೊಂಡಿದ್ದು, ಅಜ್ಜಂಪುರದಲ್ಲಿ ರಂಗಾಯಣ ಪ್ರಾರಂಭಿಸಬೇಕು. ಮುಳ್ಳಯ್ಯನಗಿರಿಯಿಂದ ದತ್ತಪೀಠಕ್ಕೆ ನಿರ್ಮಿಸಲಿರುವ ರೋಪ್‍ವೇ ಕೈಬಿಡಲು ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಸಮ್ಮೇಳನಾಧ್ಯಕ್ಷ ಡಾ. ರಾಜಪ್ಪ ದಳವಾಯಿ ಅವರ ಉಪಸ್ಥಿತಿಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಮೇಲೆ ತೀವ್ರ ಒತ್ತಡ ತರಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.

ಜಿಲ್ಲಾ ಸಾಹಿತ್ಯ ಪರಿಷತ್ತು ಕಾರ್ಯದರ್ಶಿಗಳಾದ ಎಸ್. ಎಸ್. ವೆಂಕಟೇಶ್ ಮತ್ತು ಪವನ್ ಅವರು ನಿರ್ಣಯಗಳನ್ನು ಓದಿದರು. ಸಭಿಕರು ಚಪ್ಪಾಳೆ ತಟ್ಟುವ ಮೂಲಕ ನಿರ್ಣಯಗಳನ್ನು ಅನುಮೋದಿಸಿದರು.

ಅಜ್ಜಂಪುರ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರವನ್ನು ಪುನಃಶ್ಚೇತನಗೊಳಿಸಬೇಕು.‌ ಅಜ್ಜಂಪುರದಲ್ಲಿ ತುರ್ತಾಗಿ ರೈಲ್ವೇ ಗೇಟ್ ಬದಲು ಕೆಳ ಸೇತುವೆ ಅಥವಾ ಮೇಲ್ ಸೇತುವೆ ನಿರ್ಮಾಣಮಾಡಬೇಕು. ಅಜ್ಜಂಪುರ ಶಿವಾನಂದಾಶ್ರಮ ಪುನಶ್ಚೇತನಗೊಳಿಸುವುದು, ಹಾಳಾಗಿರುವ ಅಜ್ಜಂಪುರ ಕಲಾಶ್ರೀ ರಂಗಮಂದಿರ ಕೆಡವಿ ಹೊಸದಾಗಿ ನಿರ್ಮಾಣ ಮಾಡುವಂತೆ ಒತ್ತಾಯಿಸಲಾಗಿದೆ.

ಬೇಲೇನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಕುಡಿಯಲು ಅಜ್ಜಂಪುರ ಜನತೆಗೆ ಭದ್ರಾ ನೀರುಕೊಡುವುದು, ನೂತನ ತಾಲೂಕು ಕೇಂದ್ರವಾಗಿರುವ ಅಜ್ಜಂಪುರ ಮತ್ತು ಕಳಸ ತಾಲೂಕುಗಳಿಗೆ ಎಲ್ಲಾ ಸರಕಾರಿ ಕಛೇರಿಗಳು ಪ್ರಾರಂಭಕ್ಕೆ ಅಗತ್ಯವಿರುವ ಕಟ್ಟಡಗಳೂ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಿ, ಪೂರ್ಣ ಪ್ರಗತಿ ಸಾಧಿಸಲು ಸರ್ಕಾರವನ್ನು ಕೋರಲಾಗಿದೆ.

ಅಜ್ಜಂಪುರಕ್ಕೆ ಕನ್ನಡ ಭವನ ನಿರ್ಮಾಣ. ಚಿಕ್ಕಮಗಳೂರು ಚಂದ್ರದ್ರೋಣ ಪರ್ವತ ಇತ್ತೀಚೆಗೆ ಪ್ರವಾಸಿಗರು ಕಲುಷಿತಗೊಳಿಸುತ್ತಿದ್ದು, ಇದನ್ನು ನಿಯಂತ್ರಿಸಬೇಕು. 10. ರಾಜ್ಯಾದ್ಯಂತ ತಾಂತ್ರಿಕ ಕಾಲೇಜುಗಳಲ್ಲಿ ಮಕ್ಕಳಿಗೆ ಕನ್ನಡ ಬೋಧನೆ ಅಗತ್ಯವೆಂದು ನಿರ್ಣಯದಲ್ಲಿ ತಿಳಿಸಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here