ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು ; ಎನ್.ಜೆ.ನಾಗರಾಜ್

0 48


ಶಿವಮೊಗ್ಗ : 2023-24 ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆಯಾಗಿದ್ದು ರೈತರು ತಾವು ಬೆಳೆದ ಬೆಳೆಯ ಮಾಹಿತಿಯನ್ನು ಸ್ವತಃ ಅಪ್ಲೋಡ್ ಮಾಡಲು ಅವಕಾಶವಿದ್ದು, ತಾವೇ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು ಎಂದು ತಹಶೀಲ್ದಾರ್ ಎನ್.ಜೆ.ನಾಗರಾಜ್ ತಿಳಿಸಿದರು.


ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಿ: 11-09-2023 ರಂದು ಏರ್ಪಡಿಸಲಾಗಿದ್ದ ಬೆಳೆ ಸಮೀಕ್ಷೆ ತರಬೇತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾವು ಬೆಳೆದ ಬೆಳೆಯ ಮಾಹಿತಿ ಪಹಣಿಯಲ್ಲಿ ಬರಲು ಬೆಳೆ ವಿಮೆ ಸೌಲಭ್ಯ ಪಡೆಯಲು, ಬೆಳೆ ಹಾನಿ ಪರಿಹಾರ ಪಡೆಯಲು, ಬೆಂಬಲ ಬೆಲೆ ಯೋಜನೆ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಸೌಲಭ್ಯವನ್ನು ಪಡೆಯಲು ಕೂಡಲೇ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಸಹಾಯಕ ಕೃಷಿ ನಿರ್ದೇಶಕರು ಎಸ್. ಟಿ. ರಮೇಶ್ ಮಾತನಾಡಿ, ರೈತರು ತಮ್ಮ ಮೊಬೈಲ್‍ನಲ್ಲಿ ಗೂಗಲ್ ಪ್ಲೇಸ್ಟೋರ್‍ಗೆ ಹೋಗಿ “ಮುಂಗಾರು ರೈತರ ಬೆಳೆ ಸಮೀಕ್ಷೆ-2023” ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ನೇರವಾಗಿ ಸಮೀಕ್ಷೆ ಮಾಡಬಹುದು ಹಾಗೂ ತಮ್ಮ ಗ್ರಾಮಕ್ಕೆ ಹಂಚಿಕೆಯಾದ ಖಾಸಗಿ ನಿವಾಸಿಗಳ ಸಹಾಯ ಪಡೆಯಬಹುದು. ಬೆಳೆ ವಿಮೆ ಮಾಡಿಸದ ರೈತರು ಕಡ್ಡಾಯವಾಗಿ ದಿನಾಂಕ: 15.09.2023 ರೊಳಗೆ ಬೆಳೆ ಸಮೀಕ್ಷೆ ಮಾಡಿಸಬೇಕು ಎಂದು ತಿಳಿಸಿದರು.


ಬೆಳೆ ಸಮೀಕ್ಷೆ ತರಬೇತಿಯಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಕಾಂತರಾಜ್ ಹಾಗೂ ಹೆಚ್.ಈ ಮಹೇಶ್ವರಪ್ಪ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಹಾಗೂ ಕಂದಾಯ, ಕೃಷಿ, ತೋಟಗಾರಿಕೆ, ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!