2 ಮತ್ತು 3ನೇ ಹಂತದ ಮೂಲಕ ಹಳ್ಳಿಗಳಿಗೆ ನೀರು ಪೂರೈಕೆ ಯೋಜನೆಗೆ ಅನುಮೋದನೆ: ಸಿಎಂ ಭರವಸೆ

0
145

ಚಿಕ್ಕಮಗಳೂರು : ಭದ್ರಾ ಜಲಾಶಯದಿಂದ ಕಡೂರು,ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕುಗಳ ಹಳ್ಳಿಗಳಿಗೆ ನೀರು ಪೂರೈಸಲು ಎರಡು ಮತ್ತು ಮೂರನೇ ಹಂತದ ಯೋಜನೆಗೆ ಅನುಮೋದನೆ ನೀಡುವುದಾಗಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಘೋಷಿಸಿದ್ದಾರೆ.

ನಗರದ ಎಟಿಐ ಕಾಲೇಜು ಆವರಣದಲ್ಲಿ ನಡೆದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಈಗಾಗಲೇ 1281 ಕೋಟಿ ರೂ ಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಮೊದಲ ಹಂತದ ಕಾಮಗಾರಿ ಆರಂಭವಾಗಿದ್ದು, ರಾಜ್ಯದಲ್ಲಿ ಚಿಕ್ಕಮಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಸಂಚಾರಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ತಿಳಿಸಿದ ಅವರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಚಿಕ್ಕಮಗಳೂರಿನಲ್ಲಿ ಹೆಲಿಪೋರ್ಟ್ ಅನ್ನು ಈ ವರ್ಷದ ಅತ್ಯಂತದಲ್ಲೆ ಆರಂಭಿಸುವ ಭರವಸೆ ನೀಡಿದರು.

ಮುಳ್ಳಯ್ಯನಗಿರಿ ಬಾಬಾಬುಡನ್ ಗಿರಿಗೆ ರೋಪ್ ವೇ ಅಳವಡಿಸುವುದಾಗಿ ತಿಳಿಸಿ ಚಿಕ್ಕಮಗಳೂರು ನಿಸರ್ಗದ ಪವರ್ ಹೌಸ್ ಎಂದು ವರ್ಣಿಸಿದರು.

ಮುಂದಿನ ದಿನಗಳಲ್ಲಿ ಭಾರಿ ದೊಡ್ಡ ಬದಲಾವಣೆ ನೋಡುತ್ತೇವೆ ಅಭಿವೃದ್ಧಿಪಥದತ್ತ ನಿರಂತರವಾಗಿ ಸಾಗುತ್ತೇವೆ ಎಂದು ಹೇಳಿದರು.

ಸತತ ಮಳೆ ಹಿನ್ನೆಲೆಯಲ್ಲಿ ಮೂರು ಗಂಟೆ ತಡವಾಗಿ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.

ಈ ಸಮಾರಂಭದಲ್ಲಿ ಶಾಸಕ ಸಿ ಟಿ ರವಿ, ಟಿ ಡಿ ರಾಜೇಗೌಡ, ಬೆಳ್ಳಿ ಪ್ರಕಾಶ್, ಎಂ ಪಿ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್, ಪ್ರಾಧಿಕಾರದ ಅಧ್ಯಕ್ಷ ಆನಂದ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಭಾಗವಹಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here