2020-21ನೇ ಸಾಲಿನಲ್ಲಿ ಅನುಮೋದನೆಗೊಂಡ ನರೇಗಾ ಕಾಮಗಾರಿ ಅನುಷ್ಠಾನ ಮಾಡಲು ಗ್ರಾಪಂ ಒಕ್ಕೂಟದಿಂದ ಮನವಿ

0
551

ಹೊಸನಗರ: ತಾಲ್ಲೂಕಿನಲ್ಲಿ 2020-21ನೇ ಸಾಲಿನ ಅನುಮೋದನೆಗೊಂಡ ಕಾಮಗಾರಿಯನ್ನು ಅನುಷ್ಠಾನ ಮಾಡಲು ಅನುವು ಮಾಡಿಕೊಡಬೇಕೆಂದು ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷರಾದ ಚಿದಂಬರ್ ಹೆಚ್.ಬಿಯವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಸಮ್ಮುಖದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಿ. ಯವರಿಗೆ ಮನವಿ ಪತ್ರ ಸಲ್ಲಿಸಿ 2022ನೇ ಸಾಲಿಗೆ ಅನಿಷ್ಠಾನಗೊಂಡ ಕಾಮಗಾರಿಯನ್ನು ಮಾಡಲು ಬಿಡದಿದ್ದರೆ ತಾಲ್ಲೂಕು ಪಂಚಾಯಿತಿಯ ಎದುರು ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಒಕ್ಕೂಟದಿಂದ ಸಲ್ಲಿಸಿದ ಮನವಿ ಪತ್ರದಲ್ಲಿ ಎಂ.ಜಿ.ಎನ್.ಆರ್ ಈ ಜಿ.ಎ ಯೋಜನೆಯಡಿ ಈ ಹಿಂದೆ 2ವರ್ಷದ ಕಾಮಗಾರಿಗಳು ಅನುಮೋದನೆ ಆಗಿದ್ದರೆ ಪ್ರಸ್ತುತ ಸಾಲಿನಲ್ಲಿ ಕಾಮಗಾರಿ ಪ್ರಾರಂಬಿಸಲು ಪ್ರಾರಂಭ ಪತ್ರ ಪಡೆದು ನಿರ್ವಹಿಸುವ ಅವಕಾಶ ಇತ್ತು. ಆದರೆ ಸರ್ಕಾರ ಹೊರಡಿಸುವ ಉಲ್ಲೇಖ ಪತ್ರದಲ್ಲಿ ತಿಳಿಸಿದಂತೆ ಹಿಂದಿನ ಸಾಲಿನ ಕಾಮಗಾರಿಗಳನ್ನು ಪುನಃ ಕ್ರಿಯಾಯೋಜನೆಗೆ ಸೇರಿಸಿ ಸಕ್ರಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಂತರ ಅನುಷ್ಠಾನ ಮಾಡಲು ತಿಳಿಸಿದ್ದಾರೆ ಆದರೆ ಈ ರೀತಿಯಿಂದ ಈಗಿನ ಎಂ.ಜಿ.ಎನ್.ಆರ್ ಈ ಜಿ.ಎಯೋಜನೆಯಲ್ಲಿ ಕಾಮಗಾರಿ ಹೆಚ್ಚಾಗಿ ರೈತರಿಗೆ ಸಂಬಂಧಿಸಿದ ಕಾಮಗಾರಿಗಳು ಆಗಿರುವುದರಿಂದ ಪುನಃ ಕ್ರಿಯಾ ಯೋಜನೆ ಮಾಡುವುದರಿಂದ ಹೆಚ್ಚು ಸಮಯ ಅವಕಾಶ ಬೇಕಾಗುತ್ತದೆ ಅಲ್ಲದೇ ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ರೈತರು ಹೆಚ್ಚಾಗಿ ಅಡಿಕೆ ತೋಟ, ವಯಕ್ತಿಕ ಇಂಗು ಗುಂಡಿ, ದನದ ಕೊಟ್ಟಿಗೆ, ಕೃಷಿ ಬಾವಿ, ಕೃಷಿ ಹೊಂಡ ಸಾರ್ವಜನಿಕ ತೆರೆದ ಬಾವಿ, ಕೆರೆ ರಸ್ತೆ, ಬಾಕ್ಸ್ ಚರಂಡಿ, ಶಾಲೆ ಕಾಂಪೌಂಡ್ ಇತರೆ ಕಾಮಗಾರಿ ಮಾಡಲು ಹೆಚ್ಚು ಆಸಕ್ತಿ ವಹಿಸಿರುತ್ತಾರೆ. ಮಲೆನಾಡು ಪ್ರದೇಶವಾಗಿರುವುದರಿಂದ ಇಲ್ಲಿ ಮಳೆ ಹೆಚ್ಚು ಆಗುವುದರಿಂದ ಕಾಮಗಾರಿ ಮಾಡಲು ಸಾಧ್ಯವಿಲ್ಲ ಆದ್ದರಿಂದ ರೈತರಿಗೆ ಅನುಕೂಲ ಮಾಡಿಕೊಡಲು ಪ್ರಸ್ತುತ ಸಾಲಿನ ಹಿಂದಿನ 2 ವರ್ಷದ ಅನುಮೋದನೆಗೊಂಡ ಕಾಮಗಾರಿಗಳನ್ನು ನಿರ್ವಹಿಸಲು ಹಾಗೂ ಸಮುದಾಯ ಕಾಮಗಾರಿಗಳನ್ನು ಮಾನ್ಯ ತಾಲ್ಲೂಕು ಕಾರ್ಯನಿರ್ವಹಕ ಅಧಿಕಾರಿಗಳಿಂದ ಪ್ರಾರಂಭ ಪತ್ರ ಪಡೆದು ಕಾಮಗಾರಿ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ಮನವಿ ಪತ್ರ ನೀಡುವ ಸಂದರ್ಭದಲ್ಲಿ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ, ತ್ರಿಣಿವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷ ಕೃಷ್ಣಮೂರ್ತಿ, ಮಾವಿನಕಟ್ಟೆ ಶಿವಾನಂದ, ಸಾಕಮ್ಮ, ಚಂದ್ರಪ್ಪ, ಲಕ್ಷ್ಮಣ, ಸತೀಶ, ರಮೇಶ್, ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾದ ದಿವ್ಯಾ, ಬೃಂದಾವನ ಪ್ರವೀಣ್, ಗ್ಯಾಸ್ ಮಹೇಂದ್ರ ಹಾಗೂ ತಾಲೂಕಿನ 30 ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here