2022-23ನೇ ಸಾಲಿಗೆ ಮರುವಿನ್ಯಾಸಗೊಳಿಸಿದ ಹವಾಮಾನಾಧರಿತ ಬೆಳೆ ವಿಮೆ ಮಾಡಿಸಲು ಜೂ. 30 ಅಂತಿಮ ದಿನ

0
5058

ಶಿವಮೊಗ್ಗ: 2022-23 ನೇ ಸಾಲಿಗೆ ಸರ್ಕಾರದ ಆದೇಶದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ (RWBCIS)ಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದ್ದು, ಸದರಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ರೈತರು ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿರುತ್ತದೆ.

ಸರ್ಕಾರದ ಆದೇಶದಲ್ಲಿ ರೈತರು ಅಡಿಕೆ, ಕಾಳುಮೆಣಸು ಮತ್ತು ಶುಂಠಿ ಬೆಳೆಗಳಿಗೆ ವಿಮೆಗೆ ನೊಂದಾಯಿಸಲು ಅಂತಿಮ ದಿನಾಂಕವನ್ನು 30-06-2022 ವರೆಗೆ ಹಾಗೂ ಮಾವು ಬೆಳೆಗೆ ಅಂತಿಮ ದಿನಾಂಕವನ್ನು 31-07-2022 ವರೆಗೆ ನಿಗದಿಪಡಿಸಲಾಗಿರುತ್ತದೆ.

ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ್‌ಕಾರ್ಡ್, ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಬ್ಯಾಂಕ್‌ಗಳಿಗೆ ಸಂಪರ್ಕಿಸಿ ರೈತರು ನಿಗದಿತ ಅಂತಿಮ ದಿನಾಂಕದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಕಂಡಂತೆ ಆಯಾಯ ತಾಲೂಕು ತೋಟಗಾರಿಕಾ ಇಲಾಖೆ ಕಛೇರಿಗಳನ್ನು ಅಥವಾ ರೈತ ಸಂಪರ್ಕದ ಅಧಿಕಾರಿಗಳನ್ನು ಸಂಪರ್ಕಿಸಲು ತೋಟಗಾರಿಕಾ ಉಪನಿರ್ದೇಶಕರು ಶಿವಮೊಗ್ಗ ಇವರು ಕೋರಿದ್ದಾರೆ.

ಶಿವಮೊಗ್ಗ : 08182-270415/ 9448036611, ಭದ್ರಾವತಿ : 08282-268239/ 9900046087, ಶಿಕಾರಿಪುರ : 08187-223544/ 9663634388, ಸೊರಬ : 08184-272112/9108280642, ಸಾಗರ : 08183-226193/ 7892782514, ತೀರ್ಥಹಳ್ಳಿ : 08181-228151/ 9900046084, ಹೊಸನಗರ : 08185-221364/ 9591695327.

ಜಾಹಿರಾತು

LEAVE A REPLY

Please enter your comment!
Please enter your name here