27ರ ಭಾರತ್ ಬಂದ್ ಯಶಸ್ವಿಯಾಗಲು ವರ್ತಕರು ಸಹಕರಿಸಲು ಮನವಿ

0
197

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಜನವಿರೋಧಿ ಕೃಷಿ ಕಾಯ್ದೆ ರದ್ದತಿ ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಇದೆ ತಿಂಗಳು 27 ರಂದು ರಾಷ್ಟ್ರೀಯ ಕಿಸಾನ್ ಮೋರ್ಚಾ ನೀಡಿರುವ ಬಂದ್ ಕರೆಗೆ ವರ್ತಕರು, ರೈತರುಗಳು ಬೆಂಬಲಿಸುವಂತೆ ಜಿಲ್ಲೆಯಲ್ಲಿನ ವಿವಿಧ ಪಕ್ಷದ ಮುಖಂಡರು ಮತ್ತು ಕನ್ನಡ ಪರ ಸಂಘಟನೆಗಳು ಮನವಿ ಮಾಡಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಪಕ್ಷಗಳ ಮುಖಂಡರುಗಳು ಸೇರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಕೇಂದ್ರ ಸರ್ಕಾರ ಕೃಷಿ ನೀತಿ ಖಂಡಿಸಿ ಕಳೆದ 10 ತಿಂಗಳಿನಿಂದ ದೆಹಲಿಯಲ್ಲಿ ರೈತರು ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಸಕಾರಾತ್ಮಕ ಸ್ಪಂದಿಸುತ್ತಿಲ್ಲ.

ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹಾಗೂ ಇದನ್ನು ಖಾತರಿಪಡಿಸುವ ಕಾನೂನು ಜಾರಿಗೆ ತರಬೇಕು, ಕರಾಳ ಕಾಯ್ದೆ ರದ್ದುಪಡಿಸಬೇಕು ಎನ್ನುವುದು ಮುಖ್ಯ ಹಕ್ಕು ಒತ್ತಾಯ ಆಗಿದ್ದು, ಡೀಸೆಲ್, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ವಿಪರೀತವಾಗಿ ಏರಿತು ಇದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ಜಿಲ್ಲೆಯ ಸಾರ್ವಜನಿಕ ಹಾಗೂ ವರ್ತಕರು ವ್ಯಾಪಾರ, ವಹಿವಾಟುಗಳನ್ನು ಸ್ಥಗಿತಗೊಳಿಸಿ ರೈತರ ಬಂದ್‌ಗೆ ಬೆಂಬಲ ನೀಡಲು ಮನವಿ ಮಾಡಿದರು.

27 ಸೋಮವಾರ ಬೆಳಿಗ್ಗೆ 11ಕ್ಕೆ ನಗರದ ಹನುಮಂತ್ತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ಮಾಹಿತಿಯನ್ನು ನೀಡಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಪಕ್ಷದ ಮತ್ತು ಸಂಘಟನೆಯ ಮುಖಂಡರುಗಳದ ಬಿ.ಅಮ್ಜದ್, ಎಚ್.ಎಚ್. ದೇವರಾಜ್, ಎಚ್.ಎಸ್ ಪುಟ್ಟಸ್ವಾಮಿ, ತೇಗೂರು ಜಗದೀಶ್, ರಾಜೇಗೌಡ ಎಂ.ಸಿ. ಬಸವರಾಜ್, ಅಣ್ಣಯ್ಯ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here