8 ಲಕ್ಷ ರೂ. ಬೇಡಿಕೆ ; ಸಹಾಯಕ ಯೋಜನಾಧಿಕಾರಿ ಎಸಿಬಿ ಬಲೆಗೆ !

0
609

ಚಿಕ್ಕಮಗಳೂರು : ನಗರದ ನಗರಾಭಿವೃದ್ಧಿ ಪ್ರಾಧಿಕಾರದ ತಿಮಿಂಗಿಲ ಎಸಿಬಿ ಬಲೆಗೆ ಬಿದ್ದಿದೆ.

ಹೌದು, ಸಿಡಿಎಯ ಸಹಾಯಕ ಯೋಜನಾಧಿಕಾರಿ ಶಿವಕುಮಾರ್ ಎರಡು ಲಕ್ಷ ಹಣ ಪಡೆಯುವ ವೇಳೆ‌ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಚೇರಿ ಪಕ್ಕದಲ್ಲಿಯೇ ಹಣ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿ ಬಂಧಿಸಿದ್ದಾರೆ.

ಲೇಔಟ್ ನಿರ್ಮಿಸಲು ಗೋಪಿನಾಥ್ ಎಂಬುವರಿಂದ ಲಂಚ ಪಡೆಯುವ ವೇಳೆ‌ ಎಸಿಬಿ ದಾಳಿ ನಡೆಸಿದ್ದು, ಈ ಲಂಚ ನೀಡಲು ಬ್ರೋಕರ್ ರಮೇಶ್ ಎಂಬುವವನ ಮೂಲಕ ಸಂಪರ್ಕಿಸಿದ್ದ ದೂರುದಾರ.

ಎಸಿಬಿ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ದಾಳಿ ನಡೆಸಿದ್ದು 8.5 ಲಕ್ಷ ರೂ. ಡಿಮ್ಯಾಂಡ್ ಮಾಡಿ ಮುಂಗಡ ಹಣ ಎರಡು ಲಕ್ಷ ಪಡೆಯುವ ವೇಳೆ‌ ಎಸಿಬಿ ದಾಳಿ ಮಾಡಿ ಶಿವಕುಮಾರ್ ರವರನ್ನು ಬಂಧಿಸಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here