90ರ ವಸಂತಕ್ಕೆ ಕಾಲಿಟ್ಟ ಹಿರಿಯ ಪತ್ರಕರ್ತ ಎಸ್.ಜಿ.ರಂಗನಾಥ ರವರಿಗೆ ಸನ್ಮಾನ

0
570

ರಿಪ್ಪನ್‌ಪೇಟೆ: ಬ್ರಾಹ್ಮಣ ಸಮುದಾಯದವರು ಹೆಚ್ಚು ಬುದ್ದಿವಂತರು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ ಆದರೆ ಸಂಘಟನೆಯಿಲ್ಲದೆ ಸಮುದಾಯದವರು ನಿರ್ಲಕ್ಷ್ಯಕ್ಕೆ ಒಳಗಾಗುವಂತಾಗಿದೆ ಕಾರಣ ಇರುವ ಮೂರು ಮೊತ್ತೊಂದು ಕುಟುಂಬದವರಲ್ಲಿ ಉತ್ತರ-ದಕ್ಷಿಣವಾಗಿದ್ದೇವೆ ಎಂದು ನಿವೃತ್ತ ಶಿಕ್ಷಕ ಶಂಕರನಾರಯಣ ಅಸಮದಾನ ವ್ಯಕ್ತಪಡಿಸಿದರು.

ಇಲ್ಲಿನ ಅರಸಾಳು ಶ್ರೀರಾಮ ಮಂದಿರದಲ್ಲಿ ಹೊಸನಗರ ತಾಲ್ಲೂಕು ಬ್ರಾಹ್ಮಣ ಸಮಾಜದವರು ಆಯೋಜಿಸಲಾಗಿದ್ದ 90ರ ವಸಂತಕ್ಕೆ ಕಾಲಿಟ್ಟ ಹಿರಿಯ ಚೇತನ ಪತ್ರಕರ್ತ ಅರಸಾಳು ಎಸ್.ಜಿ.ರಂಗನಾಥರಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕತ್ತರಿಯ ಕೆಲಸ ಮಾಡದೆ ಸೂಜಿ-ದಾರದ ಕೆಲಸ ಮಾಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮ.ಸ.ನಂಜುಂಡಸ್ವಾಮಿ ಮಾತನಾಡಿ, ಬ್ರಾಹ್ಮಣ ಸಮುದಾಯದ ಏಳಿಗೆಗೆ ಎಲ್ಲರೂ ಸಂಘಟಿತರಾಗಬೇಕು ಇತರ ಸಮಾಜದವರಿಗೆ ಮೀಸಲಾತಿಯ ಬಗ್ಗೆ ಸಾಕಷ್ಟು ಹೋರಾಟಗಳು ನಡೆಯುತ್ತಿದ್ದು ನಮ್ಮ ಬ್ರಾಹ್ಮಣ ಸಮಾಜದವರು ಯಾವುದೇ ಹೋರಾಟ ನಡೆಸದೆ ಉದ್ಯೋಗ ಇನ್ನಿತರ ರಾಜಕೀಯ ಸ್ಪರ್ಧೆಯಲ್ಲಿ ನಮ್ಮ ಸಮುದಾಯದವರಿಗೆ ಹೆಚ್ಚು ಅವಕಾಶ ಕಲ್ಪಿಸುವ ಬಗ್ಗೆ ಚರ್ಚಿಸುವುದು ಸೇರಿದಂತೆ ಸಮಾಜದಲ್ಲಿನ ಕಟ್ಟಕಡೆಯ ಕುಟುಂಬಗಳನ್ನು ಸಮಾಜಮುಖಿಗೆ ತರುವಂತಹ ಕಾರ್ಯದಲ್ಲಿ ಎಲ್ಲರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಹೊಸನಗರ ತಾಲ್ಲೂಕ್ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ 90ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿರಿಯ ಪತ್ರಕರ್ತ ಎಸ್.ಜಿ.ರಂಗನಾಥ ಮತ್ತು ಶಾಂತಮ್ಮ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸಾಗರದ ಪತ್ರಕರ್ತರಾದ ಹಿತಕರಜೈನ್, ಗಣಪತಿ ಶಿರಳಗಿ, ಛಾಯಾಪತಿ, ಲಿಂಗಜೋಯ್ಸ್ ಇನ್ನಿತರ ಸಮಾಜದ ಮುಖಂಡರು ಹಾಜರಿದ್ದರು.

ಗಾಯಿತ್ರಿ ವಿನಾಯಕ ಪ್ರಾರ್ಥಿಸಿದರು. ರಿಪ್ಪನ್‌ಪೇಟೆ ಬ್ರಾಹ್ಮಣ ಸಮಾಜದ ನಿರ್ದೇಶಕ ಸತ್ಯನಾರಾಯಣರಾವ್ ಸ್ವಾಗತಿಸಿದರು. ಛಾಯಪತಿ ನಿರೂಪಿಸಿದರು. ವಿನಾಯಕರಾವ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here