90 ಕೆ.ಜಿ ಪವರ್ ಲಿಫ್ಟಿಂಗ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಶಿವಮೊಗ್ಗದ ಡಿ.ಜಿ ಪರುಶುರಾಮ್ ಅವರಿಗೆ 2 ಚಿನ್ನದ ಪದಕ

0
374

ಶಿವಮೊಗ್ಗ: ಇತ್ತೀಚೆಗೆ ಹರಿಯಾಣ ರಾಜ್ಯದ ಸೋನಿಪತ್‍ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಬೆಂಚ್ ಪ್ರೆಸ್ ಹಾಗೂ ಡೆಡ್ ಲಿಫ್ಟ್ ಪ್ರತ್ಯೇಕ ಸ್ಪರ್ಧೆಗಳಲ್ಲಿ ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿದ್ದ ಶಿವಮೊಗ್ಗದ ಕ್ರೀಡಾಪಟು 2ರ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ನಗರದ ಡಿ.ಜಿ.ಪರಶುರಾಮ್ ಈ ಕೀರ್ತಿಗೆ ಪಾತ್ರರಾಗಿದ್ದು, ಇವರು ನ್ಯಾಚುರಲ್ ಸ್ಟ್ರಾಂಗ್ ಪವರ್ ಲಿಫ್ಟಿಂಗ್ ಫೆಡರೇಷನ್ ವತಿಯಿಂದ ನಡೆದ ಮಾಸ್ಟರ್ 2 ವಿಭಾಗದ 90 ಕೆ.ಜಿ.ಸ್ಪರ್ಧೆಯಲ್ಲಿ ಭಾಗವಹಿಸಿ 2 ಚಿನ್ನದ ಪದಕ ಗಳಿಸಿದ್ದಾರೆ.

ಪರಶುರಾಮ್ ಅವರು, ಶಿವಮೊಗ್ಗದವರಾಗಿದ್ದು, ನೆಹರೂ ಕ್ರೀಡಾಂಗಣದಲ್ಲಿರುವ ವ್ಯಾಯಾಮ ಶಾಲೆಯಲ್ಲಿ ಸತತ ಅಭ್ಯಾಸ ಮಾಡುತ್ತಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಇವರನ್ನು ನ್ಯಾಚುರಲ್ ಸ್ಟ್ರಾಂಗ್ ಫವರ್ ಲಿಫ್ಟಿಂಗ್ ಫೆಡರೇಷನ್‍ನ ದಕ್ಷಿಣ ಭಾರತ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅಲ್ಲದೆ ಇವರು ರಾಷ್ಟ್ರೀಯ ತೀರ್ಪುಗಾರರಾಗಿಯೂ ಅನೇಕ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.

ಬೆಳ್ಳಿ ಪದಕ :

ನ್ಯಾಚುರಲ್ ಸ್ಟ್ರಾಂಗ್ ಫವರ್ ಲಿಫ್ಟಿಂಗ್ ಫೆಡರೇಷನ್ ನಡೆಸಿದ ಇದೇ ಸ್ಪರ್ಧೆಯಲ್ಲಿ ಶಿವಮೊಗ್ಗದ ಮತ್ತೊರ್ವ ಕ್ರೀಡಾಪಟು ಕೆ.ಬಿ.ಮಂಜುನಾಥ್ ಕೂಡ ಭಾಗವಹಿಸಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ಮಂಜುನಾಥ್ ಅವರು 82.5 ಕೆ.ಜಿ. ಮಾಸ್ಟರ್ 1 ವಿಭಾಗದಲ್ಲಿ ಈ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ಸಹ ಫೆಡರೇಷನ್‍ನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ತೀರ್ಪುಗಾರರಾಗಿಯೂ ಕೂಡ ಕೆಲಸ ಮಾಡಿದ್ದಾರೆ.

ಈ ಇಬ್ಬರ ಸಾಧನೆಗೆ ಅವ ಅಭಿಮಾನಿಗಳು, ಗೆಳೆಯರು ಅಭಿನಂದನೆ ಸಲ್ಲಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here