ಮಲೆನಾಡಿಗೆ ಸರ್ಕಾರಿ ಬಸ್ ಸೌಲಭ್ಯ ಬೇಕೆ ? ಹೆಚ್.ಎಸ್.ರಾಘವೇಂದ್ರ

0 122


ಹೊಸನಗರ: ಸುಮಾರು 50 ವರ್ಷಗಳಿಂದ ಹೊಸನಗರ ತಾಲ್ಲೂಕಿನ ಸುತ್ತ-ಮುತ್ತ ಸರ್ಕಾರಿ ಬಸ್ ಸಂಚರಿಸಲಿಲ್ಲ ಇಲ್ಲಿ ಸಂಚಾರಿಸಿರುವುದೇ ಗಜಾನನ, ಹನುಮಾನ್ ಬಸ್. ಹತ್ತಿಪ್ಪತ್ತು ವರ್ಷಗಳ ಇತ್ತೀಚೆಗೆ ಗುರುಶಕ್ತಿ, ಭಾಗ್ಯಲಕ್ಷ್ಮಿ ಶೃಂಗಗಿರಿ, ದುರ್ಗಾ ಪರಮೇಶ್ವರಿಯಂತಹ ಖಾಸಗಿ ಬಸ್‌ಗಳನ್ನು ನಮ್ಮ ಮಲೆನಾಡಿನ ಜನ ನೋಡಿದ್ದಾರೆ ಆಶೀರ್ವದಿಸಿದ್ದಾರೆ ಉತ್ತಮ ಮಾರ್ಗ ಸೌಲಭ್ಯ ನೀಡುತ್ತಿರುವ ನಮ್ಮ ತಾಲ್ಲೂಕಿಗೆ ವಾರಕ್ಕೂಮ್ಮೆ ತಿಂಗಳಿಗೊಮ್ಮೆ ಬರುವ ಸರ್ಕಾರಿ ಕೆಂಪು ಬಸ್ ಬೇಕೆ? ಎಂದು ಹೆಚ್.ಎಸ್. ರಾಘವೇಂದ್ರರವರು ಪ್ರಶ್ನಿಸಿದ್ದಾರೆ.


ಈ ಸರ್ಕಾರಿ ಬಸ್‌ಗಳ ಬಗ್ಗೆ ಕನಿಕರ:


ಐದು ವರ್ಷಗಳ ಇತ್ತಿಚೇಗೆ ಬೆಂಗಳೂರು-ಕೊಲ್ಲೂರು, ಭಟ್ಕಳ ಬೆಂಗಳೂರು ಸಿಗಂದೂರು- ಬೆಂಗಳೂರು ಬೆರಳೆಣಿಕೆಯಷ್ಟು ಸರ್ಕಾರಿ ಬಸ್ ಸೌಲಭ್ಯ ನಮ್ಮ ಜನ ಪಡೆದಿದ್ದಾರೆ, ಪಡೆಯುತ್ತಿದ್ದಾರೆ. ಇಡೀ ಹೊಸನಗರ ತಾಲ್ಲೂಕಿನ ಸುತ್ತ-ಮುತ್ತ ತಾಲ್ಲೂಕುಗಳಿಗೆ ನಮ್ಮ ಪಕ್ಕದ ಜಿಲ್ಲೆಗಳಿಗೆ ಖಾಸಗಿ ಬಸ್‌ಗಳಲ್ಲಿ ಸುಖಕರ ಪ್ರಯಾಣ ಬೆಳೆಸಿದ ನಮ್ಮ ಬುದ್ಧಿವಂತ ಜನಕ್ಕೆ ಎಷ್ಟೋ ವರ್ಷಗಳಿಂದ ನಷ್ಟದಲ್ಲಿ ಬಸ್ ಓಡಿಸುತ್ತಿರುವ ಖಾಸಗಿ ಬಸ್ ಮಾಲೀಕನ್ನು ಬಿಟ್ಟು ಸರ್ಕಾರಿ ಬಸ್‌ಗಳನ್ನು ಓಡಿಸಬೇಕು ಎಂದ ಕನಿಕರಕ್ಕೆ ಬಿದ್ದಿದ್ದು ಏಕೆ? ಮತ್ತು ಹೇಗೆ?


ಸರ್ಕಾರಿ ಬಸ್ ಬಿಟ್ಟರೆ ತೊಂದರೆ ಯಾರಿಗೆ?

ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸಿದ್ಧರಾಮಯ್ಯನವರು ತಮ್ಮ ಗ್ಯಾರಂಟಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂಬ ಕಾರಣಕ್ಕೆ ನಮ್ಮ ತಾಲ್ಲೂಕಿಗೂ ಸರ್ಕಾರಿ ಬಸ್ ಬಂದರೆ ನಾವು ಉಚಿತವಾಗಿ ಓಡಾಟ ನಡೆಸಬಹುದು ಎಂದು ಆಲೋಚನೆ ನಮ್ಮ ಮಹಿಳೆಯರ ತಲೆಯಲ್ಲಿ ಇರಬಹುದು. ಅಲ್ಪ ತೃಪ್ತಿಗಾಗಿ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಖಾಸಗಿ ಬಸ್‌ಗಳನ್ನು ಮರೆತರೆ ಮುಂದೊಂದು ದಿನ ನೋವು ಅನುಭವಿಸಬೇಕಾಗುತ್ತದೆ ಎಂದರು.

ನಮ್ಮ ಮಲೆನಾಡಿನ ಭಾಗದಲ್ಲಿ ಸಾವಿರರು ಕುಟುಂಬಗಳು ಖಾಸಗಿ ಬಸ್ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ ಅದೆಷ್ಟು ಗ್ಯಾರೇಜ್ ಆಟೋ ಮೊಬೈಲ್ ಹಾಗೇ ಖಾಸಗಿ ಬಸ್ ನಂಬಿಕೊಂಡ ಬಸ್ ಡ್ರೈವರ್‌ಗಳು ಕಂಡಕ್ಟರ್‌ಗಳು ಕ್ಲೀನರ್‌ಗಳು ಏಜೆಂಟರುಗಳು, ಲೆಕ್ಕಪತ್ರಾಧಿಕಾರಿಗಳು ತಮ್ಮ ಜೀವನ ನಡೆಸುತ್ತಿದ್ದಾರೆ ಪುಕ್ಕಟೆ ಮಹಿಳಾ ಪ್ರಯಾಣಕ್ಕೆ ಇಡೀ ತಾಲ್ಲೂಕಿನ ನೌಕರರ ಹೊಟ್ಟೆ ಮೇಲೆ ಹೊಡೆಯುವುದು ಎಷ್ಟು ಸರಿ? ಖಾಸಗಿ ಬಸ್ಸ್ ಸ್ಟ್ಯಾಂಡ್‌ಗಳಲ್ಲಿ ಪಟ್ಟಣ ಪಂಚಾಯತಿಯ 20ಸಾವಿರದ ವರೆಗೆ ಬಾಡಿಗೆ ಪಡೆದು ಅಂಗಡಿ ಮಳಿಗೆಗಳನ್ನು ಹಿಡಿದಿದ್ದಾರೆ ಅವರ ಮುಂದಿನ ಕಥೆಯೇನು? ಸಾರ್ವಜನಿಕರ ಕಷ್ಟಸುಖಗಳನ್ನು ಅರಿತು ಎಲ್ಲರಿಗೂ ತೊಂದೆಯಾಗದ ರೀತಿಯಲ್ಲಿ ಸರ್ಕಾರಿ ಬಸ್ ಬಿಡಲಿ ಬರೀ ಮಹಿಳೆಯರಿಗಾಗಿ ಕೆಂಪು ಬಸ್ ಬಿಡುವುದಕ್ಕಿಂತ ಇಂದು ಶಾಲೆಯ ಮಕ್ಕಳಿಂದ ಹಿಡಿದು ಹಿರಿಯ ನಾಗರೀಕರು ಸುಖಕರವಾಗಿ ಪ್ರಯಾಣ ಬೆಳೆಸುತ್ತಿದ್ದೂ ಹೀಗೆ ಮುಂದುವರೆಯಲಿ ಎಂದರು.

Leave A Reply

Your email address will not be published.