ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಆವರಿಸಿದ ಸೂತಕದ ಛಾಯೆ

0 1

ಸಾಗರ : ಆ ಮನೆಯಲ್ಲಿ ನಾಳೆ ಇಬ್ಬರು ಹೆಣ್ಮಕ್ಕಳ ಮದುವೆ ಇತ್ತು. ಇಡೀ ಮನೆ ಬಂಧು ಮಿತ್ರರಿಂದ ಖುಷಿಖುಷಿಯಾಗಿ ನಲಿದಾಡುತ್ತಿತ್ತು. ಆದರೆ, ಒಮ್ಮಿಂದೊಮ್ಮೆಗೇ ಈ ಮನೆಯಲ್ಲಿ ಸೂತಕದ ಕಳೆ ಆವರಿಸಿದೆ. ಯಾಕೆಂದರೆ, ನಾಳೆ ಮದುವೆಯಾಗಬೇಕಾದ ಆ ಇಬ್ಬರು ಹೆಣ್ಣು ಮಕ್ಕಳ ತಂದೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು.

ಇಂಥ ದುರದೃಷ್ಟಕರ ಘಟನೆ ನಡೆದಿರುವುದು ತಾಲೂಕಿನ ಆನಂದಪುರ ಸಮೀಪದ ಚೆನ್ನಕೊಪ್ಪದಲ್ಲಿ ನಡೆದಿದೆ. ಮೃತಪಟ್ಟವರು ಬನವಾಸಿ ನಿವಾಸಿಯಾಗಿರುವ ಮಂಜುನಾಥ ಗೌಡ. ಮಂಜುನಾಥ್‌ ಅವರು ಯಾವುದೇ ಕಾರ್ಯ ನಿಮಿತ್ತ ಪೇಟೆಗೆ ಬಂದಿದ್ದರು. ಆಗ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅವರು ಅಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಮಂಜುನಾಥ ಗೌಡ ಅವರ ಇಬ್ಬರು ಮಕ್ಕಳ ಮದುವೆ ನಾಳೆ (ಜೂನ್‌ 28) ಕೆಂಜಿಗಾಪುರದಲ್ಲಿ ಆಯೋಜನೆಯಾಗಿದೆ. ಕಳೆದ ಹಲವು ಸಮಯದಿಂದ ಈ ಮದುವೆಗಾಗಿ ಮಂಜುನಾಥ್‌ ಓಡಾಟದಲ್ಲಿದ್ದರು. ಹೆಣ್ಣುಮಕ್ಕಳು ಅವರ ಮಾವ ರುದ್ರಪ್ಪ ಗೌಡ ಚನ್ನಕೊಪ್ಪ ಅವರ ಮನೆಯಲ್ಲಿದ್ದರು. ಅಲ್ಲಿಂದಲೇ ನಾಳೆ ದಿಬ್ಬಣ ಹೊರಡುವುದಕ್ಕಿತ್ತು.

ಹೀಗೆ ಅತ್ಯಂತ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಒಮ್ಮಿಂದೊಮ್ಮೆಗೇ ಸೂತಕ ಆವರಿಸಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಂಜುನಾಥ ಗೌಡ ಅವರಿಗೆ ಡಿಕ್ಕಿ ಹೊಡೆದ ವಾಹನದ ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ.

ದುರ್ದೈವವೆಂದರೆ, ಮಂಜುನಾಥ್‌ ಅವರು ಕೆಲವು ಸಮಯದ ಹಿಂದೆ ತಮ್ಮ ಹೆಂಡತಿಯನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರು.

Leave A Reply

Your email address will not be published.

error: Content is protected !!