ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ; ಇಬ್ಬರು ಸ್ಥಳದಲ್ಲೇ ಸಾವು

0 0

ತರೀಕೆರೆ : ತಾಲೂಕಿನ ಕಟ್ಟೆಹೊಳೆ ಗೇಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ

ಬೈಕಿಲ್ಲಿದ್ದ ವಿಶ್ವಾಸ್(24), ದೀಪಿಕಾ(22) ಮೃತ ರ್ದುದೈವಿಗಳು.

ಸಾವನ್ನಪ್ಪಿದ ದೀಪಿಕಾ ಮೂಲತಃ ಚಾಮರಾಜನಗರ ಜಿಲ್ಲೆ‌ ಗುಂಡ್ಲುಪೇಟೆ ಮೂಲದವಳಾಗಿದ್ದು, ತರೀಕೆರೆ ತಾಲೂಕಿನ ಬೆಲೇನಹಳ್ಳಿ ನಿವಾಸಿ ಕಾರ್ತಿಕ್ ಸ್ನೇಹಿತೆ. ಮೃತ ವಿಶ್ವಾಸ್ ಕೂಡ ಕಾರ್ತಿಕ್ ಸ್ನೇಹಿತ. ಇಂದು ಶಿವಮೊಗ್ಗದಲ್ಲಿ ವೃತ್ತಿಯ ಸಂದರ್ಶನ ಇತ್ತು ಎಂಬ ಕಾರಣಕ್ಕೆ ಮೃತ ದೀಪಿಕಾ ಸ್ನೇಹಿತೆ ಜೊತೆ ಗುಂಡ್ಲುಪೇಟೆಯಿಂದ ತರೀಕೆರೆಗೆ ಆಗಮಿಸಿದ್ದಳು.

ಇಬ್ಬರು ಯುವತಿಯರು ಬಂದಿದ್ದ ಕಾರಣ ಮೃತ ವಿಶ್ವಾಸ್ ಸ್ನೇಹಿತ ಕಾರ್ತಿಕ್ ಅವರನ್ನ ತರೀಕೆರೆಯಿಂದ ಬೇಲೆನಹಳ್ಳಿಗೆ ಕರೆದುಕೊಂಡು ಬರಲು ಮತ್ತೊಂದು ಬೈಕಿನಲ್ಲಿ ವಿಶ್ವಾಸ್ ನನ್ನ ಕರೆದುಕೊಂಡು ಹೋಗಿದ್ದನು. ಎರಡು ಬೈಕಿನಲ್ಲಿ ಇಬ್ಬರೂ ಒಬ್ಬರನ್ನ ಕರೆದುಕೊಂಡು ಬರಲು ಹೋಗಿದ್ದರು. ಆದರೆ, ಕಾರ್ತಿಕ್ ಹಾಗೂ ಮತ್ತೋರ್ವ ಮನೆಗೆ ಬಂದಿದ್ದಾರೆ. ಆದರೆ, ವಿಶ್ವಾಸ ಹಾಗೂ ಮತ್ತೋರ್ವ ಯುವತಿ ದೀಪಿಕಾ ಬೇಲೆನಹಳ್ಳಿಗೆ ಬರುವಾಗ ಕಟ್ಟೆಹೊಳೆಯ ಗೇಟ್ ಬಳಿ ಲಾರಿಗೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಬ್ಬರಿಗೊಬ್ಬರು ಪರಿಚಯವೇ ಇರಲಿಲ್ಲ !

ಮೃತ ದೀಪಿಕಾ ಹಾಗೂ ವಿಶ್ವಾಸ್ ಗೆ ಒಬ್ಬರಿಗೊಬ್ಬರು ಗೊತ್ತೇ ಇಲ್ಲ. ಪರಿಚಯವು ಇಲ್ಲ. ಸ್ನೇಹಿತನ ಸ್ನೇಹಿತೆಯನ್ನು ಕರೆತರಲು ಹೋದಾಗ ಈ ದುರ್ಘಟನೆ ಸಂಭವಿಸಿದ್ದು ಕಾರ್ತಿಕ್ ನ ಸ್ನೇಹಿತೆ ಹಾಗೂ ಸ್ನೇಹಿತ ಇಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.

error: Content is protected !!