ಹೆಂಚು ತುಂಬಿದ್ದ ಲಾರಿ ಪಲ್ಟಿ ; ಚಾಲಕ ಸಾವು !

0 659

ಸಾಗರ : ಹೆಂಚು ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ ಹೊಡೆದು ಚಾಲಕ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.


ಸಾಗರದಿಂದ ಹೆಂಚು ತುಂಬಿಕೊಂಡು ಸೊರಬ ಕಡೆ ಹೊರಟಿದ್ದ ಲಾರಿ (ಕೆ.ಎ.15ಎ 7186) ಮರಸ ಗ್ರಾಮದ ಸಮೀಪ ಪಲ್ಟಿ ಹೊಡೆದು ಚಾಲಕ ಸೊರಬ ತಾಲ್ಲೂಕಿನ ಉಸ್ಮಾನ್ ಖಾನ್ (41) ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಸ್ಥಳೀಯರು ತಿಳಿಸಿದ್ದು, ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.

error: Content is protected !!