20.6 C
Shimoga
Friday, December 9, 2022

ಹರ್ಷನ ಸಹೋದರಿ ಸೇರಿ ಹಲವರು ವಿರುದ್ಧ FIR ದಾಖಲು !

ಶಿವಮೊಗ್ಗ: ಆಜಾದ್ ನಗರದಲ್ಲಿ ಕಾರು ಜಖಂ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಹರ್ಷ ಸಹೋದರಿ ಅಶ್ವಿನಿ ಸೇರಿ ದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


ಕಲ್ಲಪ್ಪನಕೇರಿಯಿಂದ ಅಜಾದ್ ನಗರಕ್ಕೆ ಬೈಕ್‌ನಲ್ಲಿ ಬಂದ 10ರಿಂದ 15 ಜನರ ಗುಂಪು ಸಯ್ಯದ್ ಫರ್ವೀಜ್ ಎಂಬುವವರಿಗೆ ಸೇರಿದ್ದ ಇನ್ನೋವಾ ಕಾರನ್ನು ಜಖಂ ಮಾಡಿದ್ದಾರೆ. ಈ ವೇಳೆ ಕಾರಿನ ಎಡ ಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಹಾನಿಯಾಗಿದೆ. ಅಷ್ಟೇ ಅಲ್ಲದೇ ಆ ಗುಂಪು ಜೈ ಶ್ರೀರಾಮ್ ಎಂದು ಕೂಗುತ್ತಾ ಕೇಸರಿ ಬಾವುಟ ಹಿಡಿದುಕೊಂಡಿತ್ತು ಎಂದು ಸಯ್ಯ ದ್ ಫರ್ವೀಜ್ ಆರೋಪಿಸಿದ್ದಾರೆ.


ಘಟನೆಗೆ ಸಂಬಂಧಿಸಿ ಹರ್ಷನ ಸಹೋದರಿ ಅಶ್ವಿನಿ ಸೇರಿ 10-15ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!