ಅಡ್ಡ ಬಂದ ಜಿಂಕೆ ; ಚರಂಡಿಗೆ ಕಾರು ಪಲ್ಟಿಯಾಗಿ ಮೂವರಿಗೆ ಗಂಭೀರ ಗಾಯ

0 1,139

ಮೂಡಿಗೆರೆ: ಜಿಂಕೆ ಅಡ್ಡ ಬಂದು ಕಾರು ಪಲ್ಟಿಯಾಗಿ ಮೂವರಿಗೆ ಗಾಯವಾದ ಘಟನೆ ವರದಿಯಾಗಿದೆ.

ಹೊರನಾಡಿನಿಂದ ಮೂಡಿಗೆರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಸಂಪಿಗೆಖಾನ್ ಎಂಬಲ್ಲಿ ಈ ಘಟನೆ ನಡೆದಿದ್ದು ಮೂಡಿಗೆರೆಯ ಮುತ್ತಿಗೆಪುರ ಗ್ರಾಮದ ಒಂದೇ ಕುಟುಂಬದ ಡ್ರೈವರ್ ಸೇರಿ ನಾಲ್ಕು ಜನ ಹೊರನಾಡಿಗೆ ಬಂದು ದೇವರ ದರ್ಶನ ಮುಗಿಸಿ ಮರಳುತ್ತಿದ್ದ ಸಂದರ್ಭದಲ್ಲಿ ಸಂಪಿಖಾನ್ ಎಂಬಲ್ಲಿ ಕಾರಿಗೆ ಜಿಂಕೆ ಅಡ್ಡ ಬಂದಿದೆ. ಜಿಂಕೆಯನ್ನು ತಪ್ಪಿಸುವ ಯತ್ನದಲ್ಲಿ ಕಾರು ಚರಂಡಿಗೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಮೂವರಿಗೆ ಗಂಭೀರವಾದ ಗಾಯಗಳಾಗಿದೆ.

ಮಹಿಳೆಯೇರ್ವರ ಕೈ, ಇನ್ನೊಬ್ಬರ ತಲೆ ಹಾಗೂ ಕಾಲಿಗೆ ಪೆಟ್ಟಾಗಿದ್ದು, ಕೂಡಲೇ ಸ್ಥಳೀಯರು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದೆ.

Leave A Reply

Your email address will not be published.

error: Content is protected !!