ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ

0 221

ಚಿಕ್ಕಮಗಳೂರು : ಜನತಾದರ್ಶನವಲ್ಲ ಬದಲಾಗಿ ಬೋಗಸ್ ದರ್ಶನ ಎಂದು ವ್ಯಂಗ್ಯವಾಡಿದ್ದ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಅವರಿಗೆ ಸಚಿವ ಮಧು ಬಂಗಾರಪ್ಪ (Madhu Bangarappa) ತಿರುಗೇಟು ನೀಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಇದೇ ರೀತಿ ಬೋಗಸ್, ಹಿಂದುತ್ವ, ಭಾವನಾತ್ಮಕ ಎಂಬಂತಹ ವಿಚಾರಗಳನ್ನು ಇಟ್ಟುಕೊಂಡು ಹೋಗುವಾಗ ಸೋತು ಮನೆಯಲ್ಲಿ ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.

ಜನರ ಹೊಟ್ಟೆಗೆ ಹಿಟ್ಟು ಮುಖ್ಯ. ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಮುಖ್ಯ. ಇಲ್ಲದಿದ್ದಲ್ಲಿ ಬಿಜೆಪಿಯಂತೆ ಮನೆಯಲ್ಲಿ ಕೂರಿಸುತ್ತಾರೆ. ಕಳೆದ ಬಾರಿ ಬಿಜೆಪಿ ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದಿತ್ತು ಬಳಿಕ ಬಿಜಿನೆಸ್ ಮಾಡಿ ಅಧಿಕಾರ ಹಿಡಿದಿದ್ದರು. ಈ ಬಾರಿ 67ಕ್ಕೆ ಇಳಿದಿದ್ದಾರೆ ಎಂದು ವ್ಯಂಗ್ಯವಾಡಿದರು.

ಆರು ತಿಂಗಳ ಒಬ್ಬರನ್ನು ವಿರೋಧ ಪಕ್ಷದ ನಾಯಕ ನಂತರ ಮಾಡಿದ ಕ್ಷಣ ಅದೇನು ಆರ್ಭಟ. ಸ್ವಲ್ಪ ದಿನ ಆರ್ಭಟ ಮಾಡುತ್ತಾರೆ. ಜನತಾ ದರ್ಶನ ಕಾಂಗ್ರೆಸ್‌ನ ಸಂಪ್ರದಾಯ. ತಾಲೂಕು ಮಟ್ಟದಲ್ಲಿಯೂ ಜನತಾದರ್ಶನ ಆರಂಭಿಸಿದ್ದೇವೆ. ಮತ ಹಾಕಿಸಿಕೊಂಡ ಮೇಲೆ ಜನರ ಕೆಲಸ ಮಾಡಿದರೆ ಅವರ ಮನೆ ಬಾಗಿಲಿಗೆ ಹೋಗುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಸೈನಿಕರ ವಿಷಯವನ್ನು ಇಟ್ಟುಕೊಂಡೆ ರಾಜಕಾರಣ ಮಾಡುವುದು ಬಿಜೆಪಿಯ ಸಂಪ್ರದಾಯ ಎಂಬ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಶಾಸಕರ ಹೇಳಿಕೆ ಬಗ್ಗೆ ನಾನೇನು ಹೆಚ್ಚು ಹೇಳುವುದಿಲ್ಲ. ಚುನಾವಣೆ ಬಂದಾಗ ಬಿಜೆಪಿಯವರು ಸೈನಿಕರು ಹಾಗೂ ಭಾವನಾತ್ಮಕ ವಿಚಾರ ಎತ್ತಿಕೊಂಡು ರಾಜಕಾರಣ ಮಾಡುತ್ತಾರೆ ಎಂದು ಜನಸಾಮಾನ್ಯರೇ ಹೇಳುತ್ತಾರೆ ಇದನ್ನೇ ಬಾಲಕೃಷ್ಣ ಅವರು ಹೇಳಿದ್ದಾರೆ. ಬಿಜೆಪಿಯವರು ಇಂತಹ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ನಡೆಸುವುದನ್ನು ಬಿಟ್ಟರೆ ದೇಶಕ್ಕೆ ಒಳ್ಳೆಯದು ಎಂದು ಮಧುಪ್ಪ ಹೇಳಿದರು.

ಅನ್ನ ಕೊಡುವ ರೈತ ಹಾಗೂ ದೇಶ ಕಾಯುವ ಸೈನಿಕರಿಗೆ ನಾನು ಮೊದಲು ಗೌರವ ನೀಡುತ್ತೇನೆ. ಈ ಇಬ್ಬರನ್ನು ನಾವು ಸ್ವಾರ್ಥಕ್ಕೆ ಬಳಸಿಕೊಂಡರೆ ಜನ ಸೂಕ್ಷ್ಮವಾಗಿ ಗಮನಿಸಿ ತಕ್ಕ ಪಾಠ ಕಲಿಸುತ್ತಾರೆ. ಯಾರೇ ಆಗಲಿ ಸೈನಿಕರ ಬಗ್ಗೆ ಹಾಗೂ ರೈತರ ಬಗ್ಗೆ ಮಾತನಾಡುವಾಗ ಗೌರವದಿಂದ ಮಾತನಾಡಬೇಕು ಎಂದು ಹೇಳಿದರು.

ಬೆಂಗಳೂರಿನ ಶಿವಾಜಿನಗರದ ಶಾಲೆ ಕೂಸಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು, ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಅದು ಹಳೆಯ ಕಟ್ಟಡವು ಹೊಸ ಕಟ್ಟಡವು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ನಮಗೆ ಮಕ್ಕಳ ಸುರಕ್ಷತೆಯೇ ಮುಖ್ಯ. ಘಟನೆ ನಡೆದ ಮೇಲೆ ಪರಿಹಾರ ನೀಡುವುದೇ ಅಂತಿಮವಲ್ಲ. ಯಾರೇ ತಪ್ಪು ಮಾಡಿದರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

Leave A Reply

Your email address will not be published.

error: Content is protected !!