ಕಲ್ಲುಕ್ವಾರಿಯಲ್ಲಿ ಡೈನಾಮೈಟ್ ಸ್ಪೋಟ ; ಕಾರ್ಮಿಕನಿಗೆ ಗಂಭೀರ ಗಾಯ
ಕಡೂರು : ಕಲ್ಲುಕ್ವಾರಿಯಲ್ಲಿ ಡೈನಾಮೈಟ್ ಸ್ಪೋಟಗೊಂಡು ಕಾರ್ಮಿರೊಬ್ಬರ ಕಾಲು, ಎದೆ ಭಾಗಕ್ಕೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿದೆ.
ತಾಲೂಕು ಸೇವಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲದಿಂದ ಬರುವಾಗ ಡೈನಾಮೈಟ್ ಸ್ಪೋಟಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಫೋಟದಿಂದ ಗ್ರಾಮದ ಸಿದ್ದಾನಾಯ್ಕ್ ಅವರ ಎಡಗಾಲಿನ ಮೂಳೆ ಪುಡಿಯಾಗಿದೆ. ಕಾಲು ಕೈ ಎದೆ ಭಾಗಕ್ಕೆ ಗಂಭೀರ ಗಾಯವಾಗಿದೆ.

ಘಟನೆ ಬುಧವಾರ ನಡೆದಿದ್ದು, ಗಾಯಗೊಂಡ ಕಾರ್ಮಿಕ ಏಳಲಾರದೆ ಬುಧವಾರ ಸಂಜೆಯಿಂದ ಕ್ವಾರಿಯಲ್ಲೆ ಬಿದ್ದಿದ್ದ ಎನ್ನಲಾಗುತ್ತಿದ್ದು, ತೀವ್ರ ಪೆಟ್ಟಾಗಿರುವ ಎಡಗಾಲಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಕಾಲು ಬರುವುದಿಲ್ಲವೆಂದು ವೈದ್ಯರು ತಿಳಸಿದ್ದಾರೆ. ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.