ಕಾಡುಕೋಣ ತಿವಿದು ವ್ಯಕ್ತಿಗೆ ಗಾಯ

0 381

ಮೂಡಿಗೆರೆ: ತಾಲ್ಲೂಕಿನ ಲೋಕವಳ್ಳಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಕಾಡುಕೋಣ (Bison) ತಿವಿದು ವ್ಯಕ್ತಿಯೋಬ್ಬರು ಗಾಯಗೊಂಡ (Injury) ಘಟನೆ ನಡೆದಿದೆ.

ಈ ಘಟನೆಯಲ್ಲಿ ಸೋಮಶೆಟ್ಟಿ ಎಂಬುವವರಿಗೆ ಗಾಯವಾಗಿದ್ದು, ಬೆಳಿಗ್ಗೆ ತೋಟಕ್ಕೆ ಹೋಗುತ್ತಿದ್ದ ವೇಳೆ, ಏಕಾಏಕಿ ನುಗ್ಗಿದ ಕಾಡುಕೋಣ, ಕೊಂಬಿನಿಂದ ಸೋಮಶೆಟ್ಟಿ ಅವರ ತೊಡೆ, ಮುಖಕ್ಕೆ ತಿವಿದಿದ್ದು, ಅವರು ಕಿರುಚುತ್ತಿದ್ದಂತೆ ಪಕ್ಕದ ತೋಟದವರು ಕೂಗಾಡಿದ್ದರಿಂದ ಕಾಡುಕೋಣ ಓಡಿ ಹೋಗಿದೆ. ಗಾಯಾಳುವನ್ನು ಎಂಜಿಎಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

Leave A Reply

Your email address will not be published.

error: Content is protected !!