ಗಾಂಜಾ ಮತ್ತಿನಲ್ಲಿ ಗನ್, ಡ್ರ್ಯಾಗರ್ ಹಿಡಿದು ತಿರುಗುತ್ತಿದ್ದವ ಪೊಲೀಸರ ವಶಕ್ಕೆ

0 381

ಕಡೂರು : ಗಾಂಜಾ ಮತ್ತಿನಲ್ಲಿ ಗನ್ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಆರೋಪಿಯಿಂದ ಗನ್ ಹಾಗೂ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ಬೀರೂರು ಮೂಲದ ಸಮೀರ್ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಒಂದು ಲೋಡೆಡ್ ಗನ್, ಹತ್ತು ಸಜೀವ ಗುಂಡುಗಳು, ಎರಡು ಚಾಕು, ಒಂದು ಡ್ರಾಗರ್, 40 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಂಜಾ ವ್ಯಸನಿಯಾಗಿದ್ದ ಸಮೀರ್, ಭಾನುವಾರ ರಾತ್ರಿ ವೇಳೆ ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಗನ್ ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುತ್ತಿದ್ದ. ಅಲ್ಲದೆ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದರಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ಸಹಕಾರದಿಂದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಆರೋಪಿ ಸಮೀರ್ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ವೃತ್ತಿ ಮಾಡುತ್ತಿದ್ದ ಎನ್ನಲಾಗುತ್ತಿದ್ದು, ಅಕ್ರಮವಾಗಿ ಗನ್ ಖರೀದಿಸಿ ತನ್ನಲ್ಲಿ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ.

Leave A Reply

Your email address will not be published.

error: Content is protected !!